ಯುವಜನ

ಅಜ್ಜಿಯ ಮನೆಗೆ ತೆರಳಿದ್ದ 11 ವರ್ಷದ ಬಾಲಕನ ಅಪಹರಣ; 22 ಲಕ್ಷ ರೂ.ಗೆ ಬೇಡಿಕೆ!

Views: 83

ಕನ್ನಡ ಕರಾವಳಿ ಸುದ್ದಿ: ತನ್ನ ಅಜ್ಜಿಯ ಮನೆಗೆ ಹೋಗಿದ್ದ 11 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ, 22 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಪಹರಣಕ್ಕೊಳಗಾದ ಬಾಲಕನ ತಾಯಿ ಸೈಯದಾ ಸಮೀನಾ ಅಂಜುಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಂಜುಮ್ ಬೆಂಗಳೂರಿನ ನಿವಾಸಿಯಾಗಿದ್ದು, ಮಗ, ಪುತ್ರಿಯೊಂದಿಗೆ ವಾಸಿಸುತ್ತಿದ್ದಾರೆ. ಅವರ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಜುಮ್ ನವೆಂಬರ್ 4 ರಂದು ತನ್ನ ಮಗ ಮತ್ತು ಮಗಳೊಂದಿಗೆ ಕಲಬುರಗಿಯಲ್ಲಿರುವ ತನ್ನ ಅತ್ತೆ-ಮಾವನ ಮನೆಗೆ ಭೇಟಿ ನೀಡಿದ್ದರು

ನವೆಂಬರ್ 6 ರಂದು ಸಂಜೆ ಮಗ ಹತ್ತಿರದ ಮಸೀದಿಗೆ ಹೋಗಿದ್ದ ಎನ್ನಲಾಗಿದೆ. ಆದರೆ, ಎಷ್ಟು ಹೊತ್ತಾದರೂ ಹಿಂತಿರುಗಿರಲಿಲ್ಲ. ನವೆಂಬರ್ 7ರ ಸಂಜೆ, ರಾತ್ರಿ 9 ಗಂಟೆಗೆ ಮುಖ್ಯ ಬಾಗಿಲಿನ ಬಳಿ ಪತ್ರವೊಂದು ಬಿದ್ದಿತ್ತು. ಅದರಲ್ಲಿ ಅಪಹರಣಕಾರರು 22 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಕೂಡಲೇ ಹಣ ನೀಡಬೇಕು, ಇಲ್ಲದಿದ್ದರೇ ಮಗನ ಜೀವಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಪೊಲೀಸರಿಗೆ ತಿಳಿಸಿದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ದೂರು ನೀಡಲಾಗಿದೆ. ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಅಪಹರಣಕಾರರ ಬೆನ್ನು ಬಿದ್ದಿದ್ದಾರೆ.

Related Articles

Back to top button
error: Content is protected !!