ಅಗಸ್ಟ್ 10 ರಂದು ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು “ವಿಜಯ ಪಥ” ಬೃಹತ್ ಕಾರ್ಯಕ್ರಮ: ವೀರ ಯೋಧನಿಗೆ ಹುಟ್ಟೂರು ಸನ್ಮಾನ

Views: 0
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು ಇವರ ಆಶ್ರಯದಲ್ಲಿ “ವಿಜಯ ಪಥ” ಬೃಹತ್ ಕಾರ್ಯಕ್ರಮ ದಿನಾಂಕ 10.08.2025ನೇ ರವಿವಾರ ಸಂಜೆ 4.00 ಗಂಟೆಗೆ ಬಸ್ರೂರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.
ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರ ಕಾರ್ಯ, ಬದುಕು ನಮ್ಮೆಲ್ಲರಿಗೂ ಮಾದರಿ ಮತ್ತು ಸ್ಪೂರ್ತಿದಾಯಕ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಯಶಸ್ಸು ಗಳಿಸಿ, ದೇಶದ ರಕ್ಷಣೆ, ಸುರಕ್ಷತೆ ನಮ್ಮೆಲ್ಲರ ಪ್ರಥಮ ಆದ್ಯತೆ ಆಗಬೇಕು. ಸಮಯ ಬಂದರೆ ದೇಶಕ್ಕಾಗಿ ಪ್ರಾಣವನ್ನೂ ಅರ್ಪಿಸುವ ದೇಶಭಕ್ತಿಯ ಭಾವ ಎಲ್ಲರಲ್ಲಿ ಬೆಳೆಯಬೇಕು. ದೇಶ ಉಳಿದಾಗ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ ಈ ಹಿನ್ನೆಲೆಯಲ್ಲಿ ತ್ರಿವಳಿ ವಿಜಯಾಚರಣೆ ಮತ್ತು ವೀರ ಯೋಧನಿಗೆ ಹುಟ್ಟೂರಿನ ಸ್ವಾಗತ, ಭಾರತೀಯ ಸೇನೆಯ ಮೂರು ರೋಮಾಂಚಕ ಘಟನೆಗಳ ಮೆಲುಕು ಕಾರ್ಗಿಲ್ ಯುದ್ಧ, ಪುಲ್ವಾಮಾ, ಸಿಂಧೂರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಸೈನಿಕರ ಗೌರವ ಪೂರ್ಣ ಉಪಸ್ಥಿತಿಯಲ್ಲಿ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇದೀಗ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳುತ್ತಿರುವ ನಮ್ಮೂರ ಹೆಮ್ಮೆಯ ಸೈನಿಕ ಬಸ್ರೂರು ದೀಪಕ್ ಕುಮಾರ್ ಅವರಿಗೆ ಹುಟ್ಟೂರ ಸನ್ಮಾನ
ಯೋಧರೊಂದಿಗೆ ಬೃಹತ್ ಶೋಭಾಯಾತ್ರೆ ಮಧ್ಯಾಹ್ನ 2.30ಕ್ಕೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯಿಂದ ಬಸ್ರೂರು ಬಸ್ ನಿಲ್ದಾಣದವರೆಗೆ ನಡೆಯಲಿದೆ.
ಸಭಾ ಕಾರ್ಯಕ್ರಮ
ಉದ್ಘಾಟನೆ : ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾನ್ಯ ಸಂಸದರು ದಕ್ಷಿಣ ಕನ್ನಡ
ದಿಕ್ಕೂಚಿ ಭಾಷಣ : ಡಾ.ಎಮ್ ಕೊಟ್ರೇಶ್ ಕುಲಸಚಿವರು ತುಮಕೂರು ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಭಾರತೀಯ ಇತಿಹಾಸ ಸಂಕಲನ ಸಮಿತಿ ನವ ದೆಹಲಿ
ವಿಷಯ : ಭಾರತದ ಪವಿತ್ರ ನೆಲದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಹಾಗೂ ಆಪರೇಷನ್ ಸಿಂಧೂರ
ಅಧ್ಯಕ್ಷತೆ : ಶ್ರೀ ಸತ್ಯನಾರಾಯಣ ಬಸ್ರೂರು ಅಧ್ಯಕ್ಷರು ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ) ಬಸ್ರೂರು.
ಮುಖ್ಯ ಅತಿಥಿಗಳು : ಡಾ. ರಮೇಶ್ ಆಚಾರ್ಯ, ಪ್ರಾಧ್ಯಾಪಕರು, ಕೋಟ-ಪಡುಕರೆ
ಶ್ರೀ ಪ್ರವೀಣ ಕುಮಾರ್ ಶೆಟ್ಟಿ, ಉದ್ಯಮಿಗಳು, ಬ್ರಹ್ಮಾವರ
ಶ್ರೀ ಗಣಪತಿ ಖಾರ್ವಿ ಬಸ್ರೂರು, ನಿವೃತ್ತ ಯೋಧರು
ಶ್ರೀ ದೇವಾನಂದ ಶೆಟ್ಟಿ ಹಳ್ಳಾಡು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು.
ಶ್ರೀ ರಾಜೇಂದ್ರ ಶೆಟ್ಟಿಗಾರ್ ನಿರ್ದೇಶಕರು, ನೇಕಾರರ ಸೊಸೈಟಿ, ಬಸ್ರೂರು
ಶ್ರೀ ಶೀನ ಪೂಜಾರಿ, ಅಧ್ಯಕ್ಷರು ಬ.ವ್ಯ.ಸೇ.ಸ.ಸ.ನಿ, ಬಸ್ರೂರು
ಶ್ರೀ ಉಮೇಶ್ ಶೆಟ್ಟಿ, ಶಾನ್ಗಟ್ಟು ವಕೀಲರು, ಅಧ್ಯಕ್ಷರು, ಅ.ಕ.ಜ.ಚಾ.ವೇ.ಕುಂದಾಪುರ
ಶ್ರೀ ಹರ್ಷವರ್ಧನ್ ಶೆಟ್ಟಿ, ಉದ್ಯಮಿ, ಕುಂದಾಪುರ
ಶ್ರೀ ಶಾಹುಲ್ ಹಮೀದ್, ಉಪಾಧ್ಯಕ್ಷರು, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು.
ನಿರೂಪಣೆ : ಶ್ರೀಮತಿ ಸಾರಿಕಾ ಅಶೋಕ್