ಕರಾವಳಿ
ಅಕ್ಷ .ಎಸ್.ಕುಂದಾಪುರ ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಚಿನ್ನ, ಬೆಳ್ಳಿಯ ಪದಕ

Views: 224
ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ಉಡುಪಿಯ ಕೃಷ್ಣ ಮಠದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆ.ಡಿ.ಎಫ್. ಕರಾಟೆ ಕುಂದಾಪುರ ಇದರ ವಿದ್ಯಾರ್ಥಿ ಅಕ್ಷ. ಎಸ್. ಕುಂದಾಪುರ ಪೈಟಿಂಗ್‌ನಲ್ಲಿ (ಕುಮಿಟೆ) ಪ್ರಥಮ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
ಉಡುಪಿಯ ಶಾಸಕರಾದ ಯಶಪಾಲ್ ಸುವರ್ಣರವರು ಟ್ರೋಫಿ, ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿರುತ್ತಾರೆ. ವಿದ್ಯಾರ್ಥಿಗೆ ಕಿರಣ್ ಕುಂದಾಪುರ ಹಾಗೂ ಸಂದೀಪ ಕಿರಣ್ ತರಬೇತಿ ನೀಡಿರುತ್ತಾರೆ.
ಕುಂದಾಪುರದ ಎಚ್.ಎಂ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಈತ ಶ್ರೀಮತಿ ರೇಣುಕಾ ಮತ್ತು ಶ್ರೀ ಸಂದೀಪ ಕಿರಣ್ ದಂಪತಿಗಳ ಪುತ್ರನಾಗಿರುತ್ತಾನೆ