ಇತರೆ
ಅಕ್ರಮ ಸಂಬಂಧದ ಅನುಮಾನ..! ಜಗಳದಲ್ಲಿ ಪತ್ನಿಯನ್ನು ಕೊಲೆಗೈದ ಪತಿ
Views: 63
ಕನ್ನಡ ಕರಾವಳಿ ಸುದ್ದಿ: ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ.
ಮಮತಾ(45) ಮೃತ ಪತ್ನಿ, ರವಿಕುಮಾರ್(52) ಕೊಲೆಗೈದ ಗಂಡ.
ಪತ್ನಿ ಮಮತಾ ಮೇಲೆ ಪತಿಗೆ ಅಕ್ರಮ ಸಂಬಂಧದ ಬಗೆಗಿನ ಅನುಮಾನವಿದ್ದು, ಈ ಕಾರಣಕ್ಕೆ ಇಬ್ಬರ ಮಧ್ಯೆ ತೀವ್ರ ಜಗಳ ಶುರುವಾಗಿತ್ತು. ಬಳಿಕ ಗಂಡ ರವಿಕುಮಾರ್ ಪತ್ನಿಯ ತಲೆಗೆ ಕೋಲಿನಿಂದ ಬಡಿದ ಪರಿಣಾಮ ಮಮತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರವಿಕುಮಾರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌ಪಿ ರಂಜಿತ್ ಹಾಗೂ ಡಿವೈಎಸ್‌ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.





