ಇತರೆ

ಅಂಬಲಪಾಡಿ ದೇವಸ್ಥಾನದ ನವರಾತ್ರಿ ಸಂಭ್ರಮದಲ್ಲಿ ಚಿನ್ನದ ಸರ ಕಳ್ಳತನಕ್ಕೆ ಯತ್ನಿಸಿದ ಮಹಿಳೆಯರ ಬಂಧನ

Views: 147

ಕನ್ನಡ ಕರಾವಳಿ ಸುದ್ದಿ: ಅಂಬಲಪಾಡಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮದ ಜನಜಂಗುಳಿಯ ನಡುವೆಯೇ ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ಮಹಿಳೆಯರ ಬಗ್ಗೆ ವೃದ್ಧ ಸಂತ್ರಸ್ತೆಗೆ ಸಂಶಯ ಬಂದಿದ್ದು, ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ಚಿನ್ನದ ಸರ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಮಹಿಳಾ ಭಕ್ತರು ಆರೋಪಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ, ಸ್ಥಳೀಯ ಮುಖಂಡರಾದ ವಿಷ್ಣು ಶೆಟ್ಟಿ ಅವರು ಮಧ್ಯಪ್ರವೇಶಿಸಿ, ಜನರಿಂದ ಹಲ್ಲೆಯಾಗದಂತೆ ಆರೋಪಿಗಳಿಬ್ಬರನ್ನು ರಕ್ಷಿಸಿದ್ದಾರೆ.

ಪೊಲೀಸರಿಗೆ ಒಪ್ಪಿಸುವ ಸಂದರ್ಭದಲ್ಲಿ, ಆರೋಪಿ ಮಹಿಳೆಯರು ತಮಗೆ ಹುಷಾರಿಲ್ಲ ಎಂದು ಹೇಳಿಕೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಷ್ಣು ಶೆಟ್ಟಿ ಅವರು ತಮ್ಮ ವಾಹನದಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ನಂತರ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

 

 

Related Articles

Back to top button
error: Content is protected !!