ʼಕಾಂತಾರ ಚಾಪ್ಟರ್ 1′ ಹೀಗೆ ಸಾಗಿದರೆ 1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಸನಿಹಕ್ಕೆ!
Views: 79
ಕನ್ನಡ ಕರಾವಳಿ ಸುದ್ದಿ:3 ವರ್ಷಗಳ ಹಿಂದೆ ಬಂದಿದ್ದ ‘ಕಾಂತಾರ’ ಸಿನಿಮಾ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಿತ್ತು. ಇದೀಗ ಅಕ್ಟೋಬರ್ 2 ರಂದು ಬಿಡುಗಡೆಯಾದ ʼಕಾಂತಾರ ಚಾಪ್ಟರ್ 1’ಒಂದು ಸಾವಿರ ಕೋಟಿ ರೂ. ಕಲೆಕ್ಷನ್ ಗುರಿಗೆ ಇನ್ನಷ್ಟು ಸನಿಹಕ್ಕೆ ಬಂದಿದೆ.
ಈ ಚಿತ್ರದ ಕಲೆಕ್ಷನ್ ದೀಪಾವಳಿಯ ವೇಳೆ ಮತ್ತೆ ಹೆಚ್ಚಾಗಿದ್ದು, ರಿಲೀಸ್ ಆದ ಎಲ್ಲ ಭಾಷೆಗಳಲ್ಲಿಯೂ ಕಮಾಲ್ ಮಾಡುತ್ತಿದೆ. ಹೀಗೆ ಸಾಗಿದರೆ 1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ.
ಈಗಾಗಲೇ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಮತ್ತು ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ʼಕಾಂತಾರ ಚಾಪ್ಟರ್ 1′ ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸದ್ಯ ಇದರ ಮುಂದಿರುವುದು ಹಿಂದಿಯ ʼಛಾವಾʼವೊಂದೆ. ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೋಡಿಯ ʼಛಾವಾʼ 807 ಕೋಟಿ ರೂ. ಬಾಚಿಕೊಂಡಿದೆ. ದೀಪಾವಳಿ ಮುಗಿಯುವ ವೇಳೆ ರಿಷಬ್ ಶೆಟ್ಟಿ ಚಿತ್ರ ಈ ಗಳಿಕೆಯನ್ನು ಹಿಂದಿಕ್ಕಲಿದೆ ಎನ್ನುವ ಲೆಕ್ಕಾಚಾರವಿದೆ.
ಸದ್ಯ ದೇಶಾದ್ಯಂತ ಹೀಗೊಂದು ಚರ್ಚೆ ಆರಂಭವಾಗಿದೆ. ಇದುವರೆಗೆ ಈ ಮೈಲಿಗಲ್ಲನ್ನು ಕೆಲವೇ ಕೆಲವು ಭಾರತೀಯ ಚಿತ್ರಗಳು, 1 ಕನ್ನಡ ಸಿನಿಮಾ ದಾಟಿವೆ. 2022ರಲ್ಲಿ ರಿಲೀಸ್ ಆದ ಹೊಂಬಾಳೆ ಫಿಲ್ಮ್ಸ್-ಯಶ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ʼಕೆಜಿಎಫ್ 2′ ಸಿನಿಮಾ 1,200 ಕೋಟಿ ರೂ.ಗಿಂತ ಅಧಿಕ ಗಳಿಸಿ ಸ್ಯಾಂಡಲ್‌ವುಡ್‌ನ ಛಾಪನ್ನು ಈಗಾಗಲೇ ಮೂಡಿಸಿದೆ. ಸದ್ಯ ಅಂತಹದ್ದೊಂದು ಅವಕಾಶ ʼಕಾಂತಾರ ಚಾಪ್ಟರ್ 1′ ಪಾಲಿಗಿದೆ. ಈ ಅಪರೂಪದ ಸಾಧನೆಯನ್ನು ಮಾಡುತ್ತ ಎನ್ನುವ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.






