ಶಿಕ್ಷಣ

ಹೆಮ್ಮಾಡಿ ಗಾಳಿ ಮಳೆಯಿಂದ ಹಳೆಯ ಶಾಲಾ ಕಟ್ಟಡ ಕುಸಿತ

Views: 0

ಕುಂದಾಪುರ : ಹೆಮ್ಮಾಡಿ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆಯ ಕಟ್ಟಡ ಕುಸಿತದ ಘಟನೆ ರವಿವಾರ ಸಂಭವಿಸಿದೆ.

ರಜಾ ದಿನದಲ್ಲಿ ಕಟ್ಟಡ ಕುಸಿದು ಬಿದ್ದಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ

ಶಿಥಿಲಗೊಂಡಿದ್ದ ಹಳೆಯ ಕಟ್ಟಡದ ಮೂರು ಕೊಠಡಿಗಳು ಬಹುತೇಕ ಮಾಡು ಮತ್ತು ಗೋಡೆ ಕುಸಿದು ಬಿದ್ದಿದ್ದು, ಇನ್ನೊಂದು ಕೊಠಡಿಗೆ ಭಾಗಶ: ಹಾನಿಯಾಗಿದೆ.

ಇಲ್ಲಿರುವ ಮೂರು ಕೊಠಡಿಗಳಲ್ಲಿ ಯಾವುದೇ ತರಗತಿ ನಡೆಯುತ್ತಿರಲಿಲ್ಲ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಿಥಿಲ ಕಟ್ಟಡದಲ್ಲಿ ತರಗತಿಗಳನ್ನು ಸ್ಥಳಿತಗೊಳಿಸಿದರು. ಇದಕ್ಕೆ ತಾಗಿಕೊಂಡಿರುವ ಬೇರೆ ಕೊಠಡಿಗಳಲ್ಲಿ ತಾತ್ಕಾಲಿಕ ತರಗತಿ ನಡೆಸಲಾಗುತ್ತಿದೆ.

ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿ ಪಾಠ ನಡೆಸುವುದು ಸೂಕ್ತವಲ್ಲ ಎಂದು ತಿಳಿದು ಈ ಹಿಂದೆ ಇದನ್ನು ನೆಲಸಮಗೊಳಿಸಬೇಕೆಂದು ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು ಬಿಇಒ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನೆಲಸಮಗೊಳಿಸಲು ವರದಿ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾ ಸಮಿತಿಯ ಅನುಮತಿ ಬಾಕಿ ಇರುವುದರಿಂದ ಪ್ರಕ್ರಿಯೆ ವಿಳಂಬ ಗೊಂಡಿತ್ತು.

ವಿವಿಧ ತರಗತಿಗಳನ್ನು ನಡೆಸಲು ಕುಸಿತ ಜಾಗದಲ್ಲಿ ಹೆಚ್ಚುವರಿ ಕೊಠಡಿಗಳನ್ನು ಆರಂಭಿಸಬೇಕು ಎಂದು ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತ್ಯನಾರಾಯಣ ಒತ್ತಾಯಿಸಿದ್ದಾರೆ

Related Articles

Back to top button