ಇತರೆ

ಹುಣ್ಣಿಮೆಯ ದಿನ ಗಂಗಾ ಸ್ನಾನಕ್ಕೆ ಹೊರಟವರ  ಟ್ರ್ಯಾಕ್ಟರ್ ನೀರಿನ ಹೊಂಡಕ್ಕೆ ಪಲ್ಟಿಯಾಗಿ ಮಕ್ಕಳು ಸೇರಿ 15 ಮಂದಿ ಸಾವು

Views: 73

ಹುಣ್ಣಿಮೆಯ  ನಿಮಿತ್ತ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ವೊಂದು ನೀರಿನ ಹೊಂಡಕ್ಕೆ ಪಲ್ಟಿಯಾಗಿ 7 ಮಕ್ಕಳು ಹಾಗೂ 8 ಮಹಿಳೆಯರು ಸೇರಿ 15 ಮಂದಿ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಕಾಸ್ ಗಂಜ್ ಬಳಿ ನಡೆದಿದೆ..

ಟ್ರ್ಯಾಕ್ಟರ್‌ನಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಹೊಂಡದಲ್ಲಿ ಬಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ. ಈ ವೇಳೆ ಟ್ರಾಲಿಯಲ್ಲಿದ್ದ ಕೆಲವರು ಈಜಿಕೊಂಡು ಬಂದು ದಡ ಸೇರಿದ್ದಾರೆ.

ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಷ್ಟರಲ್ಲಾಗಲೇ ಅಪಘಾತದಲ್ಲಿ 7 ಮಕ್ಕಳು ಮತ್ತು 8 ಮಹಿಳೆಯರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೇ ಉಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಕೊಟ್ವಾಲಿ ಪ್ರದೇಶದ ದರಿಯಾವ್ಗಂಜ್ ಪಟಿಯಾಲಿ ರಸ್ತೆಯ ನಡುವೆ ಇರುವ ಗಧೈಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಇಟಾಹ್ ಜಿಲ್ಲೆಯ ಜೈತ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೆ ಕಾಸ್ ಗ್ರಾಮದಲ್ಲಿ ವಾಸಿಸುವ ಜನರು ಹುಣ್ಣಿಮೆಯ ದಿನದಂದು ಗಂಗಾ ಸ್ನಾನ ಮಾಡಲು ಕಾಸ್‌ಗಂಜ್‌ನ ಪಟಿಯಾಲಿ ತಹಸೀಲ್ ಪ್ರದೇಶದ ಕದರ್‌ಗಂಜ್ ಗಂಗಾ ಘಾಟ್‌ಗೆ ಹೋಗುತ್ತಿದ್ದರು.

ನಂತರ, ದರಿಯಾವ್‌ಗಂಜ್ ಪ್ರದೇಶದ ಗಾಧಿಯಾ ಗ್ರಾಮದ ಬಳಿ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ, ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಹೊಂಡಕ್ಕೆ ಉರುಳಿ ಬಿದ್ದು ಈ ಮಹಾ ದುರಂತ ಸಂಭವಿಸಿದೆ.

Related Articles

Back to top button