ಸ್ಯಾಂಡಲ್‌ವುಡ್ ಡಿಂಪಲ್ ರಾಣಿ ರಚಿತಾ ರಾಮ್ ಮದುವೆ ಫಿಕ್ಸ್?

Views: 183
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮದುವೆಯ ಬಗ್ಗೆ ಸಿಹಿ ಸುದ್ದಿ ಕೊಡುತ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ. ರಚ್ಚು ಮದುವೆಯ ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ. ಶನಿವಾರ ಪ್ರಸಾರವಾದ ಸರಿಗಮಪ ಮತ್ತು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ರಚಿತಾ ಮದುವೆ ವಿಚಾರದ ಬಗ್ಗೆ ಸುಳಿವು ನೀಡಿದ್ದಾರೆ.
ಡಿಂಪನ್ ಕ್ವೀನ್ ರಚಿತಾ ಯಾವಾಗ ಮದುವೆ ಆಗ್ತಾರೆ ಎಂದು ಅಭಿಮಾನಿ ಕಾಯುತ್ತಿದ್ದಾರೆ. ಇದೀಗ ರಚಿತಾ, ಯಾವಾಗ ಬೇಕಾದರೂ ಆಗಬಹುದು. ಕಾಲ ಕೂಡಿಬರಬೇಕು ಅಷ್ಟೇ. ಒಳ್ಳೆ ಹುಡುಗ ಸಿಕ್ಕಿದ ತಕ್ಷಣ ಮದುವೆಯಾಗ್ತೀನಿ ಎಂದಿದ್ದರು.
ಸರಿಗಮಪ ಮತ್ತು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ರಚಿತಾ ರಾಮ್, ರವಿಚಂದ್ರನ್, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದರು. ಈ ಕಾರ್ಯಕ್ರಮದಲ್ಲಿ ಗಾಯಕಾರದ ಜಸ್ಕರಣ್ ಸಿಂಗ್ ಮತ್ತು ಅಮೂಲ್ಯ ಅವರು ರಚಿತಾ ರಾಮ್ ಅಭಿಯನದ ಹಾಡುಗಳನ್ನು ಹಾಡಿದರು. ಈ ವೇಳೆ ಹಾಡುಗಳನ್ನು ಕೇಳಿದ ನಟಿ ರಚಿತಾ ರಾಮ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗಾಯಕಾರದ ಜಸ್ಕರಣ್ ಸಿಂಗ್ ಅವರಿಗೆ ರಚಿತಾ ರಾಮ್, ಹಿಂದಿಯ ಏ ರಾತೇ ಮೌಸಮ್ ಹಾಡು ಹೇಳುವಂತೆ ಕೇಳಿಕೊಂಡರು, ಈ ವೇಳೆ ಹಾಡು ಹಾಡಿದ ಜಸ್ ಕರಣ್ ಜೊತೆಗೆ ರಚಿತಾ ರಾಮ್ ಸಹ ಧ್ವನಿಗೂಡಿಸಿದ್ದಾರೆ.
ಇನ್ನೂ ಕಾರ್ಯಕ್ರಮದ ವೇದಿಕೆಯಲ್ಲಿಯೇ ಗಾಯಕಾರದ ಜಸ್ಕರಣ್ ಸಿಂಗ್ ಅವರು ರಾಣಿ ರಾಜನನ್ನೇ ಮದುವೆ ಆಗಬೇಕು ಅಂತೇನಿಲ್ಲ. ರಾಣಿಯಂತೆ ನೋಡಿಕೊಳ್ಳುವ ನನ್ನನ್ನು ಸಹ ಮದುವೆ ಆಗಬಹುದು ಎಂದು ಜಸ್ಕರಣ್ ಸಿಂಗ್ ಹೇಳುತ್ತಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಕ್ರೇಜಿಸ್ಟಾರ್ ರವಿಚಂದ್ರನ್, ಇದು ಸರಿಯಾದ ಸಮಯ ಅಲ್ಲ, ರಾಂಗ್ ಟೈಮ್ ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ರವಿ ಚಂದ್ರನ್ ಮಾತಿನಿಂದ ಜೋರಾಗಿ ಜೋರಾಗಿ ನಕ್ಕ ಡಿಂಪಲ್ ಕ್ವೀನ್ ರಚಿತಾ ರಾಮ್ ಇದಕ್ಕೆ ಶೀಘ್ರದಲ್ಲಿಯೇ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಒಟ್ನಲಿ ಸರಿಗಮಪ ಮತ್ತು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ರಚಿತಾ ಮದುವೆ ವಿಚಾರದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದು, ಅಭಿಮಾನಿಗಳು ರಚಿತಾ ಮದುವೆ ಫಿಕ್ಸ್ ಆಯ್ತು ಅಂತ ಮಾತನಾಡಿಕೊಳ್ಳುತ್ತಿದ್ದಾರೆ