ಇತರೆ

ಸುಲಿಗೆ, ಹನಿಟ್ರ್ಯಾಪ್ ಕೇಸ್: ಸೋಶಿಯಲ್ ಮೀಡಿಯಾ ಸ್ಟಾರ್ ಕೀರ್ತಿ ಪಟೇಲ್ ಬಂಧನ

Views: 139

ಕನ್ನಡ ಕರಾವಳಿ ಸುದ್ದಿ: 2024ರಲ್ಲಿ ಸುಲಿಗೆ, ಹನಿಟ್ರ್ಯಾಪಿಂಗ್ ಕೇಸ್ ನಲ್ಲಿ ಗುಜರಾತ್ ನ ಸೋಶಿಯಲ್ ಮೀಡಿಯಾ ಸ್ಟಾರ್ ಕೀರ್ತಿ ಪಟೇಲ್ ಅವರನ್ನು ಐಟಿ ಕಾಯ್ದೆಯಡಿ ದೂರಿನಂತೆ ಬಂಧಿಸಲಾಗಿದೆ.

ಕೀರ್ತಿ ಕಳೆದ 11 ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಜಾರಿ ಬೆನ್ನಲ್ಲೇ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದೇವು. ಕೊನೆಗೂ ಆಕೆಯನ್ನು ಅಹ್ಮದಾಬಾದ್ನಲ್ಲಿ ಬಂಧಿಸಲಾಗಿದೆ. ಶೀಘ್ರದಲ್ಲೇ ಕೋರ್ಟ್ಗೆ ಒಪ್ಪಿಸಿ ಮುಂದಿನ ಕ್ರಮ ತೆಗೆದುಕೊಳ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.

ಬಿಲ್ಡರ್ನಿಂದ ಸುಲಿಗೆಗೆ ಬೇಡಿಕೆ ಕೀರ್ತಿ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳಿವೆ. ಇವುಗಳಲ್ಲಿ 5 ಪ್ರಕರಣಗಳು ಸೂರತ್ ನಗರದಲ್ಲಿ ದಾಖಲಾಗಿವೆ. ಈಕೆ ಸೋಶಿಯ್ ಮೀಡಿಯಾ ಪ್ರಭಾವಿಯಾಗಿ ಕೆಲಸ ಮಾಡ್ತಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಸದ್ಯ ಸೂರತ್ ನ ಬಿಲ್ಡರ್ ಒಬ್ಬರನ್ನು ಹನಿಟ್ರ್ಯಾಪ್ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಅರೆಸ್ಟ್ ಬೆನ್ನಲ್ಲೇ ಕೀರ್ತಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅವರು ನಗುತ್ತಿದ್ದಾರೆ. ಹಸಿರು ಬಣ್ಣದ ಟಿ-ಶರ್ಟ್ ಮತ್ತು ದುಪಟ್ಟಾ ಧರಿಸಿದ್ದಾರೆ. ಪೊಲೀಸರು ಬಂಧಿಸಿದ ನಂತರವೂ ಅವರು ನಗುತ್ತಿರೋದು ಕಂಡುಬಂದಿದೆ. ಈ ಹಿಂದೆಯೂ ಕೀರ್ತಿಯನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 2022ರಲ್ಲಿ, ಕುಟುಂಬವೊಂದಕ್ಕೆ ಕಿರುಕುಳ ನೀಡಿದ್ದಕ್ಕಾಗಿ ಕೀರ್ತಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿತ್ತು. ಮೇ 2022 ರಲ್ಲಿ ಕೀರ್ತಿ ಪಟೇಲ್ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ನಂತರ ಬಂಧನ ಮಾಡಲಾಗಿತ್ತು..

Related Articles

Back to top button
error: Content is protected !!