ಶಿಕ್ಷಣ

ಸುಮನ್ವಿತಾ ಎನ್ SSLC ಪರೀಕ್ಷೆಯಲ್ಲಿ ರಾಜ್ಯ ಮಟ್ಟದ 7ನೇ ರ‍್ಯಾಂಕ್

Views: 110

ಕನ್ನಡ ಕರಾವಳಿ ಸುದ್ದಿ: 2024 -25 ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಕುಮಾರಿ ಸುಮನ್ವಿತಾ ಎನ್ ಇವರು 625 ರಲ್ಲಿ 619 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 7ನೇ ರ‍್ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ.

ಕು.ಸುಮನ್ವಿತಾ ಎನ್ ಇವರು ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ವಾರಂಬಳ್ಳಿಯ ಶಿಕ್ಷಕರಾದ ಶ್ರೀ ನಟರಾಜ ಹಾಗೂ ಶ್ರೀಮತಿ ರಂಜಿನಿ ದಂಪತಿಯ ಪುತ್ರಿ

ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

Related Articles

Back to top button