ರಾಜಕೀಯ

‘ಸರ್ಕಾರ ಪತನಗೊಳಿಸಲು ಮಸಲತ್ತು’ ಡಿಕೆಶಿ ಹೇಳಿಕೆಗೆ ರಾಜಕೀಯದಲ್ಲಿ ಸಂಚಲನ

Views: 0

ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಸುಭದ್ರ ಸರಕಾರ ರಚಿಸಿದ ಕಾಂಗ್ರೆಸ್ ನಲ್ಲಿ ಇದೀಗ ಪುನಃ ಆಪರೇಷನ್ ಕಮಲದ ಭೀತಿ ಉಂಟಾಗಿದೆ. ಇದಕ್ಕೆ ಪೂರಕವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ಸರಕಾರ ಪತನಗೊಳಿಸಲು ಮಸಲತ್ತು’ ನಡೆಯುತ್ತಿದೆ ಎಂಬ ಹೇಳಿಕೆಗೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಆಡಳಿತರೂಢ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ‘ಸಿಎಂ ಮಾಡೋದು ಗೊತ್ತು ಕೆಳಗೆ ಇಳಿಸುವುದು ಗೊತ್ತು ‘ ಸಿಡಿಸಿದ ಬಾಂಬ್ ಹೊಸ ಚರ್ಚೆಗೆ ಹುಟ್ಟು ಹಾಕಿದೆ.

ಬೆಂಗಳೂರಿನಲ್ಲಿ ರವಿವಾರ ಸಂಜೆ ನಡೆದ ಕಾರ್ಯಕ್ರಮವೊದರಲ್ಲಿ ವೇದಿಕೆಯಲ್ಲಿ ಡಿಸಿಎಂ ಈ ಹೇಳಿಕೆ ನೀಡಿದ್ದರು.ಈ ವಿಚಾರ ಸೋಮವಾರದಿಂದಲೇ ರಾಜಕಾರಣದಲ್ಲಿ ಭಾರಿ ಚರ್ಚೆ ಶುರುವಾಗಿದೆ.

ಇದೀಗ ಬಿಜೆಪಿ- ಜೆಡಿಎಸ್ ಸೇರಿದರೆ ಒಟ್ಟು ಶಾಸಕರ ಸಂಖ್ಯೆ 86ಕ್ಕೆ ಬರಲಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು 30 ರಿಂದ 35 ಶಾಸಕರನ್ನು ಹೈಜಾಕ್ ಮಾಡುವುದು ಅಷ್ಟು ಸುಲಭದ ಮಾತಲ್ಲ

ಈಗಾಗಲೇ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಒಡೆದು ಬಿಜೆಪಿ ಅಧಿಕಾರ ನಡೆಸುತ್ತಿದೆ. ಕರ್ನಾಟಕದಲ್ಲಿಯೂ ಅದೇ ರೀತಿ ಮಾಡಿದರೆ ಉಪಚುನಾವಣೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಮಾತು ಹೇಳುತ್ತಿದ್ದಾರೆ.

ಪಕ್ಷ ವಿಲೀನ ಅಥವಾ ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಎರಡನೇ ಒಂದು ಭಾಗದ ಶಾಸಕರು ಬಿಜೆಪಿಗೆ ಬರಬೇಕು. ಅಂದರೆ ಕನಿಷ್ಠ 90 ಶಾಸಕರು ಕಾಂಗ್ರೆಸ್ ವಿರುದ್ಧ ದಂಗೆ ಏಳಬೇಕು ಹೀಗಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಬಹುದು ಎಂಬ ಆತಂಕ ಕಾಂಗ್ರೆಸ್ಗಿಗರನ್ನು ಕಾಡುತ್ತಿದೆ.

ಭಾರೀ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರಿದ್ದರೂ ಕೆಲ ಶಾಸಕರನ್ನು ಆಪರೇಷನ್ ಕಮಲದ ಬಲೆಗೆ ಬೀಳದಂತೆ ಶಾಸಕರ ಮೇಲೆ ಕಣ್ಣಿಡಲು ಪಕ್ಷದ ವರಿಷ್ಠರು ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದಾರೆ. ಅಸಮಾಧಾನಿತ ಶಾಸಕರ ಮೇಲೆ ನಿಗಾ ವಹಿಸಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Related Articles

Back to top button