ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ – 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು

Views: 0
ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ – 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು
ಮುಂಬೈ: ಕಳೆದ 24 ಗಂಟೆಯಲ್ಲಿ 12 ನವಜಾತ ಶಿಶುಗಳು, 12 ವಯಸ್ಕರು ಸೇರಿ 24 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾದೆಂಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹಾವು ಕಡಿತ ಸೇರಿದಂತೆ ವಿವಿಧ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಲ್ಲಿ 24 ಗಂಟೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 6 ಗಂಡು ಹಾಗೂ 6 ಹೆಣ್ಣು ಶಿಶುಗಳು ಸೇರಿ 12 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯ ಡೀನ್ ಶಂಕರರಾವ್ ಚವ್ಹಾಣ ಹೇಳಿದ್ದಾರೆ.
ಈ ಘಟನೆಗೆ ಔಷಧಿ ಮತ್ತು ಆಸ್ಪತ್ರೆ ಸಿಬ್ಬಂದಿ ಕೊರತೆಯೇ ಕಾರಣ ಎಂದು ದೂಷಿಸಿದ್ದಾರೆ.
ಇಲ್ಲಿರುವ ಸುತ್ತಮುತ್ತಲಿನ 70-80 ಕಿಮೀ ವ್ಯಾಪ್ತಿಗೆ ಇರುವುದೊಂದೇ ಆಸ್ಪತ್ರೆ. ದೂರದ ಸ್ಥಳಗಳಿಂದ ಇಲ್ಲಿಗೆ ಬರುತ್ತಾರೆ. ಕೆಲವು ದಿನಗಳಿಂದೀಚೆಗೆ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೆಲವು ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಿ ಪೂರೈಸಬೇಕು, ಆದ್ರೆ ಇವತ್ತು ಅದೂ ಸಾಕಾಗಿಲ್ಲ. ಇದೇ ಸಮಯಕ್ಕೆ ಸಿಬ್ಬಂದಿಯ ಕೊರತೆಯೂ ಉಂಟಾಗಿದ್ದು, ಈ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.