ಆರೋಗ್ಯ

ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವು, ಪೋಷಕರ ಸ್ಥಿತಿ ಗಂಭೀರ

Views: 164

ಕನ್ನಡ ಕರಾವಳಿ ಸುದ್ದಿ:ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವನೆ ಮಾಡಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಅವರ ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆ ಅಹಮದಾಬಾದ್‌ನ ಚಾಂದಖೇಡಾದಲ್ಲಿ ನಡೆದಿದೆ.

ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ಹತ್ತಿರದ ಡೈರಿಯಿಂದ ದೋಸೆ ಹಿಟ್ಟು ತರಿಸಿದ್ದು, ಇದರಿಂದ ದೋಸೆ ಮಾಡಿ ತಿಂದಿದ್ದಾರೆ. ಬಳಿಕ ಮನೆಯಲ್ಲಿದ್ದವರಿಗೆಲ್ಲಾ ವಾಂತಿ-ಬೇಧಿ ಶುರುವಾಗಿ ಫುಡ್ ಪಾಯ್ಸನ್ ಆಗಿದೆ. ಮೂರು ತಿಂಗಳ ಮಗು ರಾಹಾ ಮತ್ತು ನಾಲ್ಕು ವರ್ಷದ ಮಗು ಮಿಶ್ರಿ ಸಾವನ್ನಪ್ಪಿದ್ದಾರೆ. ವಿಮಲ್ ಮತ್ತು ಭಾವನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಇನ್ನು ಮೂರು ತಿಂಗಳ ಮಗುವಿಗೆ ದೋಸೆಯಂಥ ಪದಾರ್ಥ ನೀಡಲಾಗುವುದಿಲ್ಲ. ಆದರೆ ತಾಯಿ ದೋಸೆ ಸೇವಿಸಿ, ಮಗುವಿಗೆ ಸ್ತನಾಪನ ಮಾಡಿಸಿದ ಬಳಿಕ ಮಗುವಿಗೂ ಪುಡ್ ಪಾಯ್ಸನ್ ಆಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ವಿಮಲ್ ಅಪ್ಪ, ನನ್ನ ಮಗ ಘನಶ್ಯಾಮ್ ಡೈರಿಯಿಂದ ಹಿಟ್ಟು ತಂದಿದ್ದ. ಅದೇ ಹಿಟ್ಟಿಂದ ದೋಸೆ ಮಾಡಿ ಸೇವಿಸಿ ಈ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಅಂಗಡಿ ಮಾಲೀಕರು, ನಿಮಗಿಂತ ಮುಂಚೆ 100ರಿಂದ 125 ಜನ ದೋಸೆ ಹಿಟ್ಟು ಖರೀದಿಸಿದ್ದಾರೆ. ಆದರೆ ಅವರಿಗೇನೂ ಆಗಲಿಲ್ಲ. ನಾನು ಹಿಟ್ಟು ಖರೀದಿಸಿದವರು ವಿಚಾರಿಸಿದ್ದೇನೆ. ಬೇಕಾದರೆ ಸಿಸಿಟಿವಿ ಪರಿಶೀಲನೆ ನಡೆಸಿ ಎಂದಿದ್ದಾರೆ.

ಇದೀಗ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ. ಅಲ್ಲದೇ, ಮೃತ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಸತ್ಯವೇನೆಂದು ತಿಳಿಯಲಿದೆ.

Related Articles

Back to top button
error: Content is protected !!