ಸಂಪಾಜೆ- ಕೊಯನಾಡು: ಲಾರಿ- ಕಾರು ಮುಖಾಮುಖಿ ಡಿಕ್ಕಿ,ನಾಲ್ವರು ಮೃತ್ಯು

Views: 109
ಕನ್ನಡ ಕರಾವಳಿ ಸುದ್ದಿ: ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಸಮೀಪದ ಕೊಯನಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಕಾರಿನಲ್ಲಿದ್ದ ನಿಹಾದ್ (23) ಮಹಮ್ಮದ್ ರಿಜ್ವಾನ್ ( 23) ರಾಖಿಬ್ (25) ಮತ್ತು ಅನೀಶ್(22) ಎಂಬವರು ಮೃತಪಟ್ಟಿದ್ದಾರೆ.


ಗೊಣಿಕೊಪ್ಪ ಮತ್ತು ಹುಣಸೂರಿನ ನಾಲ್ವರು ಯುವಕರು ದ.ಕ. ಜಿಲ್ಲೆಯ ಉಳ್ಳಾಲಕ್ಕೆ ಗುರುವಾರ ಕಾರಿನಲ್ಲಿ ತೆರಳಿದ್ದವರು ಅಲ್ಲಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಲಾರಿ ಮೈಸೂರಿನ ಕೆ.ಆರ್ ಪೇಟೆಯಿಂದ ತರಕಾರಿ ತುಂಬಿ ಕೊಂಡು ಬಂದು ಅನ್ಲೋಡ್ ಮಾಡಿ ಮತ್ತೆ ಮೈಸೂರು ಕಡೆಗೆ ತೆರಳುತ್ತಿತ್ತು. ಕೊಯನಾಡು ದೇವರಕೊಲ್ಲಿ ನಡುವಿನ ಗಾರೆಮುರಿ ಎಸ್ಟೇಟ್ ಸಮೀಪ ಎರಡು ವಾಹನಗಳು ಮುಖಾಮುಖಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ಮೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಗಂಭೀರ ಗಾಯಗೊಂಡ ಇನ್ನೊಬ್ಬನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಬಗ್ಗೆ ಮೃತಪಟ್ಟಿದ್ದಾರೆ
ಕೊಡಗು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.






