ಶಿಕ್ಷಣ

ಶೀ ಶಾರದಾ ಪದವಿ ಮತ್ತು ಪ.ಪೂ.ಕಾಲೇಜು ಬಸ್ರೂರು: ಪ್ರಣತಿ- 2024 ಅಂತರ್ ತರಗತಿ ದೀಪಾಲಂಕಾರ ಸ್ಪರ್ಧೆ

Views: 144

ಕನ್ನಡ ಕರಾವಳಿ ಸುದ್ದಿ: ಶೀ ಶಾರದಾ ಪದವಿ ಮತ್ತು ಪದವಿ ಪೂರ್ವ ಕಾಲೇಜು ಬಸ್ರೂರು ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಣತಿ- 2024 ಅಂತರ್ ತರಗತಿ ದೀಪಾಲಂಕಾರ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ಶ್ರೀ ಅಪ್ಪಣ್ಣ ಹೆಗ್ಡೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದೀಪಾವಳಿ ಹಬ್ಬದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಎಲ್ಲರಿಗೂ ಈ ಹಬ್ಬ ಶುಭ ತರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಾರದ ಶ್ರೀ ಪುರುಷೋತ್ತಮ ಬಲ್ಯಾಯ , ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಚಂದ್ರಾವತಿ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಾರಾಯಣ ಪೈ , ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಕಾಲೇಜಿನಲ್ಲಿ ಶಾರದಾ ಪೂಜೆ ನಡೆಯಿತು ಮತ್ತು ವಿದ್ಯಾರ್ಥಿಗಳಿಗೆ ದೀಪಾಲಂಕಾರ ಸ್ಪರ್ಧೆ ನಡೆಸಲಾಯಿತು.

Related Articles

Back to top button