ರಾಜಕೀಯ
ಶಿವರಾಮ್ ಸಾವಿನ ಬೆನ್ನಲ್ಲೇ ಪತ್ನಿ ವಾಣಿ ಶಿವರಾಮ್ ಇಂದು ತಮ್ಮ ರಾಜಕೀಯ ನಿರ್ಧಾರ..?.

Views: 113
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ನಿಧನದ ನಂತರ ಪತ್ನಿ ವಾಣಿ ಶಿವರಾಮ್ ಕೂಡ ಪತಿಯ ಹಾದಿಯಲ್ಲೇ ಹೆಜ್ಜೆಯಿಡಲು ಮುಂದಾಗಿದ್ದಾರೆ. ಹೀಗಾಗಿ ಇಂದು ತಮ್ಮ ರಾಜಕೀಯ ನಿಲುವನ್ನು ತಿಳಿಸಲಿದ್ದಾರೆ.ಸಾಕಷ್ಟು ಜನಸೇವೆಯನ್ನು ಮಾಡಿದ್ದ ಶಿವರಾಂ. ಅವರ ಸಾವಿನ ಬಳಿಕ ಇದೀಗ ಪತ್ನಿ ವಾಣಿ ಶಿವರಾಮ್ ಕೂಡ ದಿಟ್ಟ ಹೆಜ್ಜೆ ಇಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ವಾಣಿ ಶಿವರಾಮು ಇಂದು ರಾಜಕೀಯ ನಿಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಲುವಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಕೆ.ಶಿವರಾಮು ಅವರ ಅಭಿಮಾನಿಗಳು ಹಾಗೂ ಛಲವಾದಿ ಸಮುದಾಯದ ನಾಯಕರ ಜೊತೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ತಮ್ಮ ರಾಜಕೀಯ ಅಭಿಪ್ರಾಯ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.