ಆರ್ಥಿಕ
ಶಿರೂರು ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನ:ಸೈರನ್ ಆಗುತ್ತಲೇ ಪರಾರಿಯಾದ ಕಳ್ಳ

Views: 136
ಕನ್ನಡ ಕರಾವಳಿ ಸುದ್ದಿ :ಕೆನರಾ ಬ್ಯಾಂಕ್ ಶಾಖೆಯ ಎಟಿಎಂಗೆ ನುಗ್ಗಿದ ಕಳ್ಳನೊಬ್ಬ ಮೆಷಿನ್ ಒಡೆಯುವ ಪ್ರಯತ್ನದಲ್ಲಿರುವಾಗ ಸೈರನ್ ಆದ ಕಾರಣ ಪರಾರಿಯಾದ ಘಟನೆ ಶಿರೂರಿನಲ್ಲಿ ನಡೆದಿದೆ.
ಸೈರನ್ ಆಗುತ್ತಲೇ ಕಳ್ಳ ಓಡಿ ಹೋಗಿ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿ ಜಾಕೆಟ್ ಧರಿಸಿದ್ದು, ವೀಡಿಯೋದಲ್ಲಿ ಅಸ್ಪಷ್ಟವಾಗಿ ತೋರುತ್ತಿದ್ದಾನೆ. ಎಟಿಎಂ ಕೇಂದ್ರವು ಬ್ಯಾಂಕಿನ ಶಾಖೆಗೆ ಹೊಂದಿಕೊಂಡೇ ಇದೆ.ಎಟಿಎಂ ಕೇಂದ್ರದಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ಬ್ಯಾಂಕ್ ಸಿಬಂದಿ ಹಾಗೂ ಪೊಲೀಸರು ಸೇರಿದಂತೆ ನಾಲ್ವರ ಮೊಬೈಲ್‌ಗಳಿಗೆ ಅಲರ್ಟ್ ಸಂದೇಶ ಕೂಡ ರವಾನೆಯಾಗುತ್ತದೆ. ಬೈಂದೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.