ಇತರೆ
ಶಿರಿಯಾರ: ಎಸ್‌ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಲ್‌ಓ ಕರ್ತವ್ಯಕ್ಕೆ ಅಡ್ಡಿ,ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ!
Views: 241
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕಿನ ಶಿರಿಯಾರ ಎತ್ತಿನಟ್ಟಿ ಅಂಗನವಾಡಿ ಕಾರ್ಯಕರ್ತೆ, ಬಿಎಲ್‌ಓ ಅಮೀತಾ (50) ಶಿರಿಯಾರ ಗ್ರಾಮದ ಗ್ರಾಮ ಆಡಳಿತಾಧಿಕಾರಿಯವರ ಕಚೇರಿಯಲ್ಲಿ ಎಸ್‌ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಸುಧೀಂದ್ರ ಶೆಟ್ಟಿ ಅವರು ಗ್ರಾಮ ಆಡಳಿತಾಧಿಕಾರಿಯವರ ಕಚೇರಿಗೆ ಬಂದು ಪಿರ್ಯಾದಿದಾರರಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಮತ್ತು ತೆಗೆದು ಹಾಕಲು ತಯಾರಿಸಿದ ಪಟ್ಟಿಯನ್ನು ತೋರಿಸುವಂತೆ ಒತ್ತಾಯಿಸಿದ್ದು ಮತ್ತು ಚಂದ್ರಶೇಖರ ಶೆಟ್ಟಿ ಬಿನ್ ಶೀನಪ್ಪ ಶೆಟ್ಟಿ ಶಿರಿಯಾರ ನಾಯಕರ ಮನೆ ಇವರನ್ನು ಮತದಾರರ ಪಟ್ಟಿಯಲ್ಲಿ ಕೈಬಿಡಲು ಯಾಕೆ ಪಟ್ಟಿ ಮಾಡುತ್ತೀರಿ ಪಟ್ಟಿ ಮಾಡಲು ಯಾರು ಅಧಿಕಾರ ಕೊಟ್ಟಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈದು ,ಕೆಲಸ ಮಾಡುತ್ತಿದ್ದ ಎಸ್‌ಐಆರ್ ಗೆ ಸಂಬಂದಿಸಿದ ಪುಸ್ತಕಗಳನ್ನು ಎಳೆದು ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದು , ಅವಾಚ್ಯ ಶಬ್ದಗಳಿಂದ ಬೈದು ,ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






