ವೈವಾಹಿಕ ಜೀವನದ ಸುವರ್ಣ ಸಂಭ್ರಮಕ್ಕೆ ಶುಭಾಶಯಗಳು…ವಕ್ವಾಡಿ ನಾರಾಯಣ ಶೆಟ್ಟಿಗಾರ ಮತ್ತು ಶ್ರೀಮತಿ ಸಾವಿತ್ರಿ ನಾರಾಯಣ ಶೆಟ್ಟಿಗಾರ್ ಸುರತ್ಕಲ್

Views: 293
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ನಾರಾಯಣ ಶೆಟ್ಟಿಗಾರ ಮತ್ತು ಶ್ರೀಮತಿ ಸಾವಿತ್ರಿ ನಾರಾಯಣ ಶೆಟ್ಟಿಗಾರ್ ಸುರತ್ಕಲ್ ಇವರ ವೈವಾಹಿಕ ಜೀವನದ ಸುವರ್ಣ ಸಂಭ್ರಮವನ್ನು ಅಗಸ್ಟ್ 17ರಂದು ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಶ್ರೀ ವಕ್ವಾಡಿ ನಾರಾಯಣ ಶೆಟ್ಟಿಗಾರ ಸುರತ್ಕಲ್
ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಹಲ್ತೂರುಮನೆ ದಿ. ವಿ.ಸೋಮ ಶೆಟ್ಟಿಗಾರ ಮತ್ತು ದಿ.ಪುಟ್ಟಮ್ಮ ದಂಪತಿಗಳ ಸುಪುತ್ರರಾಗಿ, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಕ್ವಾಡಿ ಶಾಲೆಯಲ್ಲಿ ,ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕೋಟೇಶ್ವರ ಬೋರ್ಡ್ ಹೈಸ್ಕೂಲ್ ನಲ್ಲಿ ಪೂರೈಸಿ, ಪಿ.ಯು.ಸಿ.ಯನ್ನು 1963ರಲ್ಲಿ ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ಅಭ್ಯಸಿಸಿ ಬಳಿಕ ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗನ್ನು 1966ರಲ್ಲಿ ಅಭ್ಯಸಿಸಿರುತ್ತಾರೆ. ಪೂನಾದ ಖಾಸಗಿ ಕಂಪೆನಿಯಲ್ಲಿ ರೈಲ್ವೆವರ್ಕ್ಸ್ನಲ್ಲಿ ಮೂರು ವರ್ಷ ಕೆಲಸ ನಿರ್ವಹಿಸಿದ್ದು, ತದನಂತರ ಪಣಂಬೂರು ಎನ್.ಎಮ್.ಪಿ.ಟಿ.ಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ವೃತ್ತಿಜೀವನ ಪ್ರಾರಂಭಿಸಿ, ಅಸಿಸ್ಟೆಂಟ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿ 2002ರಲ್ಲಿ ನಿವೃತ್ತರಾಗಿರುತ್ತಾರೆ.
ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು ಹಾಗೂ ದ.ಕ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ( ರಿ.) ತಾವು ಉಭಯ ಸಂಘಗಳ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದು 2003-2008ರ ಅವಧಿಯಲ್ಲಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿರುತ್ತಾರೆ. ಬಾರ್ಕೂರು ದೇವಸ್ಥಾನದ ಸದಸ್ಯರಾಗಿದ್ದು ದೇವಸ್ಥಾನದ ಅಭಿವೃದ್ಧಿಗೆ ಅನುಪಮ ಸೇವೆಸಲ್ಲಿಸಿದ್ದಾರೆ.ಪತ್ನಿ ಶ್ರೀಮತಿ ಸಾವಿತ್ರಿ ಕೆ.ಹಾಗೂ ಇಬ್ಬರು ಪುತ್ರರು, ಸೊಸೆಯಂದಿರು ಮೊಮ್ಮಕ್ಕಳೊಂದಿಗೆ ಸುರತ್ಕಲ್ ಹೊಸಬೆಟ್ಟುವಿನಲ್ಲಿ ವಾಸವಿದ್ದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಇವರ ಉತ್ತಮ ಸೇವಾಕಾರ್ಯವನ್ನು ಗುರುತಿಸಿ 2022-23ನೇ ಸಾಲಿನ ‘ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿ’ಯನ್ನು ಪ್ರದಾನಮಾಡಲಾಯಿತು.
ಶ್ರೀಮತಿ ಸಾವಿತ್ರಿ ನಾರಾಯಣ ಶೆಟ್ಟಿಗಾರ್
ಮೂಲತಃ ಕಿನ್ನಿಮುಲ್ಕಿಯವರಾದ ಇವರು ಕಡು ಬಡತನದಲ್ಲಿ ನರ್ಸಿಂಗ್ ತರಬೇತಿಯನ್ನು ಪಡೆದು ಮಂಗಳೂರು, ಕುಂದಾಪುರ ಮತ್ತು ಶಿವಮೊಗ್ಗದಲ್ಲಿ ಸುಮಾರು 36 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿರುವರು. ಸೇವಾವಧಿಯ ಕೊನೆಯ ಹನ್ನೆರಡು ವರ್ಷ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿ ವಿಶೇಷ ಅನುಭವ ಪಡೆದಿದ್ದಾರೆ. ನಿವೃತ್ತ ಜೀವನದಲ್ಲಿ ಸಾಕಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವರು. ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರಿನ ಮಹಿಳಾ ವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ನಿಮ್ಮ ಸುಮಧುರ ದಾಂಪತ್ಯ ಜೀವನದ 50ನೇ ಸಂಭ್ರಮವನ್ನು ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಗಸ್ಟ್ 17ರಂದು ಆಚರಿಸಿಕೊಳ್ಳುತ್ತಿದ್ದೀರಿ, ಹಿರಿಯರು, ಮಾರ್ಗದರ್ಶಕರು ಆದ ತಾವು.. ನಿಮಗೆ ದೇವರು ಇನ್ನಷ್ಟು ಆಯುರಾರೋಗ್ಯ ಕೊಟ್ಟು ಕಾಪಾಡಲಿ, ಇನ್ನು ಮುಂದೆಯೂ ನೀವು ನಗುನಗುತ್ತಾ ಜೊತೆ ಜೊತೆಯಾಗಿರಿ ಎಂದು ಶುಭ ಹಾರೈಕೆಗಳು.






