ಸಾಂಸ್ಕೃತಿಕ

ವಿಮಾನ ತುರ್ತು ಭೂಸ್ಪರ್ಷ: ಪ್ರಾಣಾಪಾಯದಿಂದ ಪಾರಾದ ನಟಿ ರಶ್ಮಿಕಾ ಮಂದಣ್ಣ 

Views: 106

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟಿ ಶ್ರದ್ಧಾ ದಾಸ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಪ್ರಾಣಾಪಾಯದಿಂದ ಸ್ಪಲ್ಪದರಲ್ಲಿ ಪಾರಾದುದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಹಾಗೂ ಶ್ರದ್ಧಾದಾಸ್ ಅವರುಗಳು ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ

ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾದಾಸ್ ಅವರುಗಳು ಮುಂಬೈ ವಿಮಾನ ನಿಲ್ದಾಣದಿಂದ ಹೈದರಾಬಾದ್​ಗೆ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು. ವಿಮಾನ ಟೇಕ್ ಆಫ್ ಆದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣವನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ. ತಮ್ಮ ಹಾಗೂ ಶ್ರದ್ಧಾದಾಸ್​ರ ಕೆಲವು ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದು, ‘ಇಂದು ಹೀಗೆ ಮಾಡಿ ನಾವು ಪ್ರಾಣಾಪಾಯದಿಂದ ಪಾರಾದೆವು’ ಎಂದಿದ್ದಾರೆ

 

Related Articles

Back to top button