ಜನಮನ

ವಿಚ್ಛೇದನಕ್ಕೆ ವಿವೇಚನಾಧಿಕಾರ : ಸುಪ್ರೀಂ ಕೋಟ್೯ ಮಹತ್ವದ ತೀಪು೯

Views: 0

ಮುರಿದು ಹೋದ ದಾಂಪತ್ಯ ಜೀವನ ಮತ್ತೆ ಒಂದಾಗಿಸಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಗೆ ತಲುಪಿದ್ದರೆ, ಅಂತಹ ದಂಪತಿಗಳು ವಿಚ್ಛೇದನಕ್ಕಾಗಿ 6 ತಿಂಗಳು ಕಾಯಬೇಕಿಲ್ಲ,

ಸಂವಿಧಾನದ 142 ನೇ ವಿಧಿ ಅನ್ವಯ ತನಗಿರುವ ವಿವೇಚನಾಧಿಕಾರ ಬಳಸಿಕೊಂಡು ಅಂತಹ ದಂಪತಿಗೆ ತತ್ ಕ್ಷಣವೇ ವಿಚ್ಛೇದನ ನೀಡಬಹುದು.

ಎಂಬ ಮಹತ್ವದ ತೀಪ೯ನ್ನು ಸೋಮವಾರ ಸವೋಚ್ಚ ನ್ಯಾಯಾಲಯ ನೀಡಿದೆ.

ಏನಿದು ತೀಪು೯?  ಪತಿ-ಪತ್ನಿ ಇಬ್ಬರೂ ದೂರವಾಗಲು ನಿಶ್ಚಯಿಸಿ, ತಾವು ಮತ್ತೆ ಒಂದಾಗಿ ಸಹಬಾಳ್ವೆ ನಡೆಸಲು ಸಾಧ್ಯವೇ ಇಲ್ಲ ಎಂಬ ನಿಧಾ೯ರಕ್ಕೆ ಬಂದಿದ್ದರೆ, ಅಂತಹ ಸಮಯದಲ್ಲಿ ಆ ದಂಪತಿಗೆ ನ್ಯಾಯಾಲಯವು ತನ್ನ ವಿವೇಚನಾಧಿಕಾರ ಬಳಸಿಕೊಂಡು ವಿಚ್ಛೇದನ ನೀಡಬಹುದು. ಹಿಂದೂ ವಿವಾಹ ಕಾಯ್ದೆಯ ಅನ್ವಯ ಅವರು 6 ತಿಂಗಳು ಕಾಯಬೇಕಾಗಿಲ್ಲ ಎಂದು ನ್ಯಾಯ ಪೀಠ ಹೇಳಿದೆ.

ಮದುವೆ ಸಂಪೂರ್ಣ ವಿಫಲಗೊಂಡ ನಂತರ ಮತ್ತೆ ಅವರು ಒಂದಾಗಿ ಬಾಳಲು ಸಾಧ್ಯವಿಲ್ಲ ಎಂದು ಸಾಬೀತಾದರೆ, ಪರಿಪೂರ್ಣ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೋಟ್೯ ಈ ಅಧಿಕಾರವನ್ನು ಬಳಸಿಕೊಳ್ಳಬಹುದು ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.

Related Articles

Back to top button