ಧಾರ್ಮಿಕ

ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಮಹಾಶಿವರಾತ್ರಿ”ಆಚರಣೆ 

Views: 35

ಕುಂದಾಪುರ :ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾರ್ಚ್ 8 ರಂದು ಮಹಾಶಿವರಾತ್ರಿ ಆಚರಣೆ ವಿಜೃಂಭಣೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 9ಕ್ಕೆ ಏಕದಶಾ ರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ತುಂಬೆ ಹೂವು-ಬಿಲ್ವಪತ್ರೆಯಿಂದ ವಿಶೇಷ ಪೂಜೆ, 12:30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ.

ಸಂಜೆ 7 ಕ್ಕೆ ಜಾಗರಣೆ ಪ್ರಯುಕ್ತ ವಕ್ವಾಡಿ ಚಿತ್ತಾರಿ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ, ರಕ್ತೇಶ್ವರಿ ಭಜನಾ ಮಂಡಳಿ ಹಾಗೂ ಮಹಾಲಿಂಗೇಶ್ವರ ಭಜನಾ ಮಂಡಳಿ ಇವರಿಂದ ‘ಕುಣಿತ ಭಜನೆ’ ನಡೆಯಲಿದೆ.

ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾ ಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಪರ್ಯಾಯ ಅರ್ಚಕ  ವೃಂದದವರು ವಿನಂತಿಸಿಕೊಂಡಿದ್ದಾರೆ.

ಸಂಪರ್ಕ 9449555633

Related Articles

Back to top button