ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಬರಲಿದೆ QR ಕೋಡ್..!..ಏನಿದು.?

Views: 125
ಈ ಬಾರಿ ಮತದಾರರ ಮನಗೆಲ್ಲಲು ಚುನಾವಣಾ ಆಯೋಗ ಹೊಸ ಹೆಜ್ಜೆ ಇಟ್ಟಿದೆ. ಚುನಾವಣೆ ಗೆಲ್ಲಲು ಡಿಫರೆಂಟ್ ಆಗಿ ಯೋಚನೆ ಮಾಡುತ್ತಿದೆ. ಅನೇಕ ಹೊಸ ಹೊಸ ತಂತ್ರಕ್ಕೆ ಕೈ ಹಾಕುತ್ತಿದೆ.ಅದರಂತೆ ಮತದಾರರ ಸಂಖ್ಯೆ ಹೆಚ್ಚಿಸಲು, ಲೋಕ ಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ QR ಕೋಡ್ ಅಸ್ತ್ರ ಪ್ರಯೋಗಿಸಿದೆ.
ಬೆಂಗಳೂರು ಸೇರಿ ಅನೇಕ ಮಹಾನಗರದಲ್ಲಿ ಮತಗಟ್ಟೆ ಹುಡುಕಾಟ ಮಾಡುವುದೇ ದೊಡ್ಡ ಸಮಸ್ಯೆ, ಟ್ರಾಫಿಕ್ ಸಮಸ್ಯೆಯಿಂದ, ಲೋಕೇಷನ್ ಕಂಡು ಹಿಡಿಯೋದೇ ತಲೆನೋವು. ಈ ಎಲ್ಲಾ ಸಮಸ್ಯೆಯಿಂದ ಬಹುತೇಕರು ಮತ ಹಾಕೋಕೆ ಹಿಂದೇಟು ಹಾಕ್ತಾರೆ. ಈ ಎಲ್ಲಾ ಸಮಸ್ಯೆಯನ್ನು ಮನಗಂಡ ಆಯೋಗ ಮತದಾರರ ಮನಗೆಲ್ಲೋದಕ್ಕೆ ಈ QR ಕೋಡ್ ಅಸ್ತ್ರಕ್ಕೆ ಕೈ ಹಾಕಿದೆ.
ಸಾಮಾನ್ಯವಾಗಿ ಎಲೆಕ್ಷನ್ ಆರಂಭ ಆಗೋ 5 ದಿನದ ಮುನ್ನ ಮತದಾರರ ಮನೆ ಮನೆಗೆ ಮತ ಚೀಟಿ ಬರುತ್ತೆ. ಆದ್ರೆ ಈ ಬಾರಿ ಆ ಮತ ಚೀಟಿಯ ಹಿಂಭಾಗದಲ್ಲಿ ಇದೇ QR ಕೋಡ್ ಇರಲಿದೆ. ಇದನ್ನು ಸ್ಕ್ಯಾನ್ ಮಾಡಿದಾಗ ಮತಗಟ್ಟೆ ಎಲ್ಲಿದೆ? ಎಷ್ಟು ದೂರ ಇದೆ? ಕ್ರಮಿಸಲು ಎಷ್ಟು ಸಮಯ ಬೇಕು? ಅನ್ನೋ ಮತಗಟ್ಟೆಯ ಕಂಪ್ಲೀಟ್ ವಿವರ ಲಭ್ಯವಾಗುತ್ತದೆ. ಇದಿಷ್ಟು ಮಾತ್ರವಲ್ಲದೆ ಬೆಳಗಾವಿ , ವಿಜಯಪುರ, ಕಲಬುರಗಿ, ಹುಬ್ಬಳ್ಳಿ ಧಾರವಾಡ , ದಾವಣಗೆರೆ, ಶಿವಮೊಗ್ಗ, ಮೈಸೂರು, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬಿಬಿಎಂಪಿ ಸೆಂಟ್ರಲ್, ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ ವ್ಯಾಪ್ತಿಯ ಮತಗಟ್ಟೆಗಳಲ್ಲೂ ಇದರ ಸದುಪಯೋಗ ಪಡೆಯಬಹುದಾಗಿದೆ. ಒಟ್ಟಾರೆ ಈ ಡಿಜಿಟಲ್ ಅಸ್ತ್ರದ ಮೂಲಕ ಜನ ಮತಗಟ್ಟೆಗೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುವಂತಾಗಲಿ ಎಂಬುವುದೇ ಉದ್ದೇಶ