ಲೋಕಸಭಾ ಚುನಾವಣೆ: ಹೊಸಬರಿಗೆ ಮಣೆ ಹಾಕಲು ಚಿಂತನೆ,22 ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್!

Views: 44
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎನ್ನುವ ಹೊಸ ಅಭ್ಯರ್ಥಿಗಳಿಗಾಗಿ ಹುಡುಕಾಟದಲ್ಲಿದ್ದಾರೆ.
ಕಾಂಗ್ರೆಸ್ ಈ ಬಾರಿ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿದರೆ 22 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಹೊಸ ಮುಖಗಳ ಮೊರೆ ಹೋಗಬೇಕಾಗಿದೆ ಆದರೆ ಕಲಬುರಗಿ ಮಲ್ಲಿಕಾರ್ಜುನ ಖರ್ಗೆ, ಕೊಪ್ಪಳ ರಾಘವೇಂದ್ರ ಇಟ್ನಾಳ್, ಬಳ್ಳಾರಿ ಉಗ್ರಪ್ಪ ,ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್ ಕುಮಾರ್, ಚಿಕ್ಕಬಳ್ಳಾಪುರ ಮೊಯ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು
ರಾಜ್ಯದ ಲೋಕಸಭೆಯ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ ಕಾಣುತ್ತಿದೆ ಮುಂಬರುವ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತವರು ಗೆದ್ದೇ ಗೆಲ್ಲುತ್ತಾರೆ ಎನ್ನುವ ಸಮರ್ಥ ಅಭ್ಯರ್ಥಿಗಳು ಸುಲಭವಾಗಿ ಸಿಗುತ್ತಿಲ್ಲ ಹೀಗಾಗಿ ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲೂ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಯೋಗ ಮಾಡುವ ಅನಿವಾರ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್ ಕುಮಾರ್ ಬಿಟ್ಟು ಉಳಿದೆಲ್ಲ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿರುದರಿಂದ ಸೋತವರು ಚುನಾವಣೆಯ ನಂತರ ಕ್ಷೇತ್ರದಿಂದಲೇ ದೂರವಾಗಿದ್ದಾರೆ.ಇನ್ನು ಕೆಲವರು ಪಕ್ಷ ತ್ಯಜಿಸಿದ್ದಾರೆ ಹಾಗೆಯೇ ಕೆಲವರು ಚುನಾವಣಾ ರಾಜಕೀಯ ಬೇಡ ಎಂದಿದ್ದಾರೆ ಕೆಲವರು ವಿಧಾನಸಭೆಗೆ ಸ್ಪರ್ಧಿಸಿ ಮಂತ್ರಿಯಾಗಿದ್ದಾರೆ ಆದ್ದರಿಂದ ಕಾಂಗ್ರೆಸ್ ಈ ಬಾರಿ ಆಡಳಿತದಲ್ಲಿರುವುದರಿಂದ ಮತ್ತು ಗ್ಯಾರಂಟಿ ಯೋಜನೆಗಳನ್ನು ಲಾಭ ಪಡೆಯಬೇಕಾಗಿರುವುದರಿಂದ ಗೆಲುವು ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕಾಗಿದೆ.
ಸ್ಪರ್ಧೆಗೆ ಸಚಿವರ ನಿರಾಸಕ್ತಿ: ಗೆಲ್ಲುವ ಅಭ್ಯರ್ಥಿಗಳನ್ನು ಅನಿವಾರ್ಯವಾಗಿ ಸಚಿವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ಉತ್ತರಕ್ಕೆ ಕೃಷ್ಣ ಬೈರೇಗೌಡ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.ಚಾಮರಾಜನಗರ ಹೆಚ್.ಸಿ ಮಹದೇವಪ್ಪ ,ಬೀದರ್ ಈಶ್ವರ್ ಖಂಡ್ರೆ, ಕೋಲಾರಕ್ಕೆ ಮುನಿಯಪ್ಪ, ಬೆಂಗಳೂರು ಕೇಂದ್ರಕ್ಕೆ ಜಮೀರ್ ಅಹಮ್ಮದ್ ಅಥವಾ ಕೆ ಜೆ ಜಾರ್ಜ್, ತುಮಕೂರಿಗೆ ಕೆ ಎನ್ ರಾಜಣ್ಣ ಕಣಕ್ಕೆ ಇಳಿಸುವ ಲೆಕ್ಕಾಚಾರ ಇದೆ. ಆದರೆ ಸಚಿವರು ಆಸಕ್ತಿ ತೋರಿಸುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ಕೆಪಿಸಿಸಿ ಮೂಲಗಳು