ಲೋಕಸಭಾ ಚುನಾವಣೆ ಯಾವಾಗ ? ದಿನಾಂಕದ ಬಗ್ಗೆ ಚುನಾವಣಾ ಆಯೋಗ ಸುಳಿವು!

Views: 83
ಭಾರತದ ಚುನಾವಣಾ ಆಯೋಗ (ಇಸಿಐ) ಮಾರ್ಚ್ 13 ರ ನಂತರ 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಎಲೆಕ್ಷನ್ ನಡೆಯಲಿದೆ. ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕೆ ಧಮುಕ್ಕಿದ್ದಾರೆ. ತಮ್ಮ ತಮ್ಮ ಪಕ್ಷದ ಪರ ಪ್ರಚಾರ ನಡೆಸೋದಕ್ಕೆ ತಯಾರಿಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಎಲೆಕ್ಷನ್ ಡೇಟ್ ಯಾವಾಗ ಅನೌನ್ಸ್ ಆಗುತ್ತ ಅಂತ ಕಾಯುತ್ತಿದ್ದಾರೆ. ಕೇವಲ ರಾಜಕೀಯ ನಾಯಕರಷ್ಟೇ ಅಲ್ಲ, ಇಡೀ ದೇಶದ ಜನರು ಲೋಕಸಭಾ ಎಲೆಕ್ಷನ್ ಡೇಟ್ ಯಾವಾಗ ಅನೌನ್ಸ್ ಮಾಡ್ತಾರೆ ಅಂತ ಕಾಯುತ್ತಿದ್ದಾರೆ. ಲೋಕಸಭೆ ಚುನಾವಣೆ ನಡೆಯುವ ದಿನಾಂಕದ ಬಗ್ಗೆ ಚುನಾವಣಾ ಆಯೋಗ ಸುಳಿವು ನೀಡಿದೆ. ಭಾರತದ ಚುನಾವಣಾ ಆಯೋಗ (ಇಸಿಐ) ಮಾರ್ಚ್ 13 ರ ನಂತರ 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಭಾರತದ ಚುನಾವಣಾ ಆಯೋಗ (ಇಸಿಐ) ಮಾರ್ಚ್ 13 ರ ನಂತರ 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಉಲ್ಲೇಖಿಸಿ.ಸುದ್ಧಿವಾಹಿನಿಗಳು ಶುಕ್ರವಾರ ವರದಿ ಮಾಡಿದೆ. ಚುನಾವಣಾ ಆಯೋಗದ ತಂಡಗಳು ವಿವಿಧ ರಾಜ್ಯಗಳ ಚುನಾವಣಾ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುತ್ತಿದ್ದು, ಮಾರ್ಚ್ 13 ರೊಳಗೆ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಿವೆ.
ಭಾರತದ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ (ಸಿಇಒ) ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.
ಚುನಾವಣೆಗೆ ಮುಂಚಿತವಾಗಿ ಸಮಸ್ಯೆಯ ಪ್ರದೇಶಗಳನ್ನು ಕಂಡುಹಿಡಿಯುತ್ತಿದ್ದಾರೆ. ವಿದ್ಯುನ್ಮಾನ ಮತದಾನ ಯಂತ್ರಗಳ (ಇವಿಎಂ) ಚಲನೆ, ಭದ್ರತಾ ಸಿಬ್ಬಂದಿಯ ಅಗತ್ಯತೆ, ರಾಜ್ಯ ಗಡಿಗಳಲ್ಲಿ ಜಾಗರೂಕತೆ ಮುಂತಾದ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಚುನಾವಣಾ ಆಯೋಗ ಚರ್ಚಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ವಿವಿಧ ರಾಜ್ಯಗಳಿಗೆ ಚುನಾವಣಾ ಆಯೋಗದ ಅಧಿಕಾರಿಗಳ ನಿಗದಿತ ಭೇಟಿಗಳು 2024 ರ ಚುನಾವಣಾ ಕ್ಯಾಲೆಂಡರ್ 2019 ರಂತೆಯೇ ಇರಬಹುದು ಎಂದು ಸೂಚಿಸುತ್ತದೆ.
ಏಪ್ರಿಲ್ 11 ರಿಂದ ಮೇ 19 ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಮತ ಎಣಿಕೆ ನಡೆಯಿತು.