ರಾಜಕೀಯ

ಲೋಕಸಭಾ ಚುನಾವಣೆ ಟಿಕೆಟ್ ಅಥವಾ ಸಂಘಟನೆ: ಪುತ್ತೂರಿನ ಪುತ್ತಿಲರನ್ನು ದೆಹಲಿಗೆ ಕರೆಸಿಕೊಂಡ ಬಿ.ಎಲ್.ಸಂತೋಷ್

Views: 0

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಪುತ್ತೂರಿನ ಬಿಜೆಪಿ ಭದ್ರ ಕೋಟೆಯಲ್ಲಿ ಕೈ ಮೇಲಾಗುವಂತೆ ಮಾಡಿದ ಅರುಣ್ ಕುಮಾರ್ ಪುತ್ತಿಲರನ್ನು ಪುನಹ ಪಕ್ಷಕ್ಕೆ ಸೇರಿಸಿಕೊಂಡು ಸಂಘಟನೆಯಲ್ಲಿ ಮಹತ್ವದ ಹೊಣೆ ನೀಡುವ ವಿಚಾರ ಅಥವಾ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ದೆಹಲಿಗೆ ಕರೆಸಿಕೊಂಡು ಮಹತ್ವದ ಚರ್ಚೆ ನಡೆಸಿದ್ದಾರೆ.

ಪುತ್ತೂರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಬದಲಿಗೆ ಸದಾನಂದ ಗೌಡ ಸಂಬಂಧಿ ಆಶಾ ತಿಮ್ಮಪ್ಪಗೌಡ ಅವರಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು, ಬಂಡಾಯವೆದ್ದು ಪುತ್ತಿಲ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸದಿದ್ದರೂ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಬಿಜೆಪಿ ಸೋಲಿನಲ್ಲಿ ಪುತ್ತಿಲ ಪ್ರಮುಖ ಪಾತ್ರ ವಹಿಸಿದ್ದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಳಿನ್ ಕುಮಾರ್ ಬದಲು ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯ ಬಗೆಗಿನ ಕೂಗು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳೆಯದನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಪಕ್ಷ ಸಂಘಟನೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿಯಲಾಗಿದೆ

.  ಈ ಚರ್ಚೆಯಲ್ಲಿ ಪುತ್ತಿಲ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸುವರೋ ಅಥವಾ ಇನ್ನೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಿ ಇವರ ಸಹಾಯ ಕೇಳಲು ವರಿಷ್ಠರು ತೀರ್ಮಾನಿಸಿದ್ದಾರೋ ಎನ್ನುವ ಬಗ್ಗೆ ಸ್ಪಷ್ಟತೆಯಾಗಿಲ್ಲ.

ಸಭೆಯಲ್ಲಿ ಪುತ್ತಿಲ ಜೊತೆ ಭಾಸ್ಕರ್ ಆಚಾರ್ಯ ಹಿಂದಾರು, ವೈದ್ಯ ಡಾ. ಸುರೇಶ್, ಪುತ್ತೂರಿನ ಉದ್ಯಮಿ ಗಣೇಶ್ ಪಾಲ್ಗೊಂಡಿದ್ದಾರೆ.

Related Articles

Back to top button