ಸಾಂಸ್ಕೃತಿಕ

ರಾಮ್‌ರಾಜ್ ಬ್ರ್ಯಾಂಡ್ ಪ್ಯಾನ್ ಇಂಡಿಯಾ  ಅಂಬಾಸಿಡರ್ ಆಗಿ ಕುಂದಾಪುರದ ಕಾಂತಾರ ರಿಷಬ್ ಶೆಟ್ಟಿ 

Views: 64

‘ಕಾಂತಾರ’ ಸಿನಿಮಾ ಮೂಲಕ ಕುಂದಾಪುರದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ನಿರ್ದೇಶಕರಾಗಿ, ನಟರಾಗಿ ರಿಷಬ್ ಸಂಚಲನ ಸೃಷ್ಟಿಸಿದ್ದಾರೆ. ಸದ್ಯ ಚಿತ್ರದ ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಿಷಬ್ ಹೋದಲ್ಲಿ ಬಂದಲ್ಲಿ ಸುದ್ದಿ ಆಗುತ್ತಿದ್ದಾರೆ. ಇದೀಗ.  ರಾಮ್‌ರಾಜ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಟ ರಾಕಿಂಗ್ ಯಶ್ ಯಶ್ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಈ ವರ್ಷ ಆ ಅವಕಾಶ ರಿಷಬ್ ಪಾಲಾಗಿದೆ. ಇದನ್ನು ನೋಡಿ ಕೆಲವರಿಗೆ ಅಚ್ಚರಿಯಾಗಿದೆ.

‘ಕಾಂತಾರ’ ಸಿನಿಮಾ ಸಮಯದಿಂದಲೂ ರಿಷಬ್ ಹೆಚ್ಚು ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಡಿವೈನ್ ಸ್ಟಾರ್ ದೇಶಿ ಲುಕ್ ಗಮನ ಸೆಳೆಯುತ್ತಿದೆ.

ಇದೀಗ ಒಂದು ಹಂತ ಮೇಲೇರಿ ರಾಮ್‌ರಾಜ್ ಕಾಟನ್ ಧೋತಿಗಳು, ಶರ್ಟ್‌ಗಳು, ಮಹಿಳೆಯರು ಹಾಗೂ ಮಕ್ಕಳ ಉಡುಪುಗಳ ಅತಿದೊಡ್ಡ ತಯಾರಕರು, ಪೂರೈಕೆದಾರರು ಮತ್ತು ರಫ್ತುದಾರ ಕಂಪನಿಗೆ ಅಂಬಾಸಿಡರ್ ಆಗಿದದ್ದಾರೆ. ಈಗಾಗಲೇ ಜಾಹೀರಾತು ಸಹ ರಿಲೀಸ್ ಆಗಿ ವೈರಲ್ ಆಗುತ್ತಿದೆ. ಬಹಳ ಸೊಗಸಾಗಿ ಅದನ್ನು ಕಟ್ಟಿಕೊಡಲಾಗಿದೆ. ಕನ್ನಡದಲ್ಲಿ ಈ ಜಾಹೀರಾತು ಮೂಡಿ ಬಂದಿದೆ.

ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಜಾಹೀರಾತು ಚಿತ್ರೀಕರಣವಾಗಿದೆ. ಪಂಚೆ ಜೊತೆಗೆ ಕುರ್ತಾ, ಶರ್ಟ್‌ಗಳಲ್ಲಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡದ್ದಾರೆ. ‘ಕಾಂತಾರ’ ಚಾಪ್ಟರ್-1 ಚಿತ್ರಕ್ಕಾಗಿ ಉದ್ದನೆಯ ಗಡ್ಡ, ಕೂದಲು ಬಿಟ್ಟು ರಿಷಬ್ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಈ ಜಾಹೀರಾತಿಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ.

ರಾಮ್‌ರಾಜ್ ಸಂಸ್ಥೆ ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಜನಪ್ರಿಯವಾಗಿದೆ. ಅದೇ ಕಾರಣಕ್ಕೆ ಇತ್ತೀಚೆಗೆ ಪ್ಯಾನ್ ಇಂಡಿಯಾ ಸ್ಟಾರ್‌ಗಳನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಕೊಡುತ್ತಿದ್ದಾರೆ. ರಿಷಬ್ ಶೆಟ್ಟಿ ಸಹ ದೊಡ್ಡ ಮಟ್ಟದ ಸಂಭಾವನೆಯನ್ನೇ ಪಡೆದಿರುವ ಸಾಧ್ಯತೆಯಿದೆ.

ಇತ್ತೀಚೆಗೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೂ ರಿಷಬ್ ಶೆಟ್ಟಿ ಹಾಜರಾಗಿದ್ದರು. ಆಮಂತ್ರಣದ ಹಿನ್ನೆಲೆಯಲ್ಲಿ ಪತ್ನಿ ಸಮೇತ ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ಅಲ್ಲೂ ಸಹ ರಿಷಬ್ ಶೆಟ್ಟಿ ಪಂಚೆ ಉಟ್ಟು ಗಮನ ಸೆಳೆದಿದ್ದರು.

Related Articles

Back to top button