ಇತರೆ

ರಾಖಿ ಹಬ್ಬದ ಆಚರಣೆಗೆಂದು ತವರಿಗೆ ಬಂದಿದ್ದ ಮೂವರಿಗೆ ಹಾವು ಕಚ್ಚಿ ದಾರುಣ ಸಾವು 

Views: 165

ಕನ್ನಡ ಕರಾವಳಿ ಸುದ್ದಿ: ರಾಖಿ ಹಬ್ಬದ ಆಚರಣೆಗಾಗಿ ತವರಿಗೆ ಬಂದಿದ್ದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಹಾವು ಕಚ್ಚಿ ಸಾವನ್ನಪ್ಪಿರುವಂತಹ ದಾರುಣ ಘಟನೆ ರಾಜಸ್ಥಾನದ ಕೆಲ್ವಾರಾದಲ್ಲಿ ವರದಿಯಾಗಿದೆ.

ಈ ಮೂವರು ಮಲಗಿದ್ದಾಗ ಹಾವು ಕಚ್ಚಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೂವರು ಮೃತಪಟ್ಟಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹೋದರ ಗ್ರಾಮದ ಮನೆಯಲ್ಲಿ ಈ ಘಟನೆ ನಡೆದಿದೆ. ಪಿಂಕಿ ಚಾಂಡೆಲ್ (30) ಸಹೋದರನಿಗೆ ರಾಖಿ ಕಟ್ಟಲು ಮಧ್ಯಪ್ರದೇಶದ ಶಿವಪುರಿಯ ಅಕೋಡಾದಿಂದ ಆಗಮಿಸಿದ್ದರು. ರಾತ್ರಿ ತನ್ನ 7 ವರ್ಷದ ಮಗ ಮತ್ತು 5 ವರ್ಷದ ಮಗಳು ಹಾಸಿಗೆಯ ಮೇಲೆ ಮಲಗಿದ್ದಾಗ ಮೂವರಿಗೂ ಹಾವು ಕಚ್ಚಿದೆ ಎಂದು ತಿಳಿದು ಬಂದಿದೆ.

ಹಾವು ಕಡಿತದಿಂದ ಮಕ್ಕಳು ಅಳಲು ಪ್ರಾರಂಭಿಸಿದ್ದು, ಅವರ ಆರೋಗ್ಯ ಹದಗೆಟ್ಟಾಗ ಕುಟುಂಬದ ಇತರ ಸದಸ್ಯರಿಗೆ ಎಚ್ಚರವಾಗಿದೆ. ಈ ವೇಳೆ ಹಾವನ್ನು ಕೂಡ ಕಂಡಿದ್ದು, ತಕ್ಷಣಕ್ಕೆ ಅವರನ್ನು ಕೆಲ್ವಾರಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ಪರಿಣಾಮ ಅವರೆಲ್ಲರೂ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ಪಿಂಕಿ ಕುಟುಂಬಸ್ಥರು ಹಾವಿನ ಫೋಟೋವನ್ನು ಸಹ ವೈದ್ಯರಿಗೆ ತೋರಿಸಿದ್ದಾರೆ. ಇದು ಸಾಮಾನ್ಯ ಕ್ರೈಟ್ ಹಾವಾಗಿದೆ. ಈ ಹಾವು ಸೊಳ್ಳೆಯ ರೀತಿಯಲ್ಲಿ ಸದ್ದಿಲ್ಲದೇ ಕಚ್ಚುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾವು ಬಾಲಕನ ಬೆರಳು, ಬಾಲಕಿಯ ಕಾಲಿಗೆ ಕಚ್ಚಿದ್ದು, ಪಿಂಕಿಗೆ ಎಲ್ಲಿ ಕಚ್ಚಿದೆ ಎಂಬುದು ತಿಳಿದಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

 

Related Articles

Back to top button
error: Content is protected !!