ಯಕ್ಷಗಾನ ಮೇಳದ ಚೌಕಿಯಲ್ಲೇ ಬರೆದು ಡಾಕ್ಟರೇಟ್ ಪದವಿ ಪಡೆದ ತಾರಾನಾಥ ವರ್ಕಾಡಿ

Views: 86
ಕನ್ನಡ ಕರಾವಳಿ ಸುದ್ದಿ: ನಾಲ್ಕು ವರ್ಷಗಳ ಸತತ ಪ್ರಯತ್ನಕ್ಕೆ ಸಿಕ್ಕ ಫಲ! ಹಿರಿಯ ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಹಾಗೂ ಹವ್ಯಾಸಿ ಪತ್ರಕರ್ತರಾದ ತಾರಾನಾಥ ವರ್ಕಾಡಿ “ಕರಾವಳಿ ಕರ್ನಾಟಕದ ಯಕ್ಷಗಾನ ವೃತ್ತಿ ಪರಂಪರೆಯ ಬಹುಮುಖಿ ಅಧ್ಯಯನ” ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಡಾಕ್ಟರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಿದೆ.
ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡುತ್ತಾ ಕನ್ನಡ (ಎಂ.ಎ) ಸ್ನಾತಕೋತ್ತರ ಪದವಿಯನ್ನು ಪಡೆದ ಮೊದಲ ಯಕ್ಷಗಾನ ಕಲಾವಿದ ಎಂಬ ಕೀರ್ತಿಗೆ ಪಾತ್ರರಾಗಿದ್ದ ಇವರು ಶ್ರೀ ಕಟೀಲು ಮೇಳದ ಚೌಕಿಯಲ್ಲೇ ಕುಳಿತು ಸಂಶೋಧನಾ ಪ್ರಬಂಧವನ್ನು ಬರೆದು ಡಾಕ್ಟರೇಟ್ ಪದವಿ ಪಡೆದಿರುವ ಮೊದಲ ವೃತ್ತಿಪರ ಯಕ್ಷಗಾನ ಕಲಾವಿದನೆಂಬುದು ವಿಶೇಷ.
ಇದು ವೃತ್ತಿಪರ ಯಕ್ಷಗಾನ ಕಲಾವಿದರ ಸಾಧನೆ ಎಂಬುದು ಗಮನಾರ್ಹ. ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಸುಮಾರು 4ದಶಕಗಳ ಕಾಲ ತಿರುಗಾಟ ನಡೆಸಿದ ವರ್ಕಾಡಿಯವರು ಯಕ್ಷಗಾನ ವೇಷಧಾರಿ ಹಾಗೂ ತಾಳಮದ್ದಳೆ ಅರ್ಥದಾರಿಯಾಗಿ ಜನಮನ್ನಣೆ ಪಡೆದ ಕಲಾವಿದ. ಕನ್ನಡ ಹಾಗೂ ತುಳುವಿನಲ್ಲಿ ಅನೇಕ ‘ಯಕ್ಷಗಾನ ಪ್ರಸಂಗ ರಚಿಸಿರುವ ಇವರು ಆಯುರ್ವೇದ, ಜ್ಯೋತಿಷ್ಯ, ವಾಸ್ತುತಜ್ಞರಾಗಿಯೂ ಪರಿಚಿತರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದ ಅವರ ಬಹುಮುಖ ಚಟುವಟಿಕೆಗಳಿಗಾಗಿ ಅನೇಕ ಸಂಘ- ಸಂಸ್ಥೆಗಳು ಅವರನ್ನು ಗೌರವಿಸಿವೆ
.