ಸಾಮಾಜಿಕ

ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘ: ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ 

Views: 146

ಕನ್ನಡ ಕರಾವಳಿ ಸುದ್ದಿ: ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಅಂಗ ಸಂಸ್ಥೆ ಪದ್ಮಶಾಲಿ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಜೂನ್ 15ರಂದು ಮುಂಬಯಿ ಕುರ್ಲಾ ಪೂರ್ವದ ಬಂಟರ ಸಂಘದ ರಾಧಾಬಾಯಿ ಟಿ ಭಂಡಾರಿ ಆಡಿಟೋರಿಯಂನಲ್ಲಿ ಜರಗಿದೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಾವರ ಜಿಎಂ ಗ್ಲೋಬಲ್ ಶಾಲೆಯ ಕಾರ್ಯಾಧ್ಯಕ್ಷ  ಪ್ರಕಾಶ್ಚಂದ್ರ ಶೆಟ್ಟಿ ಅವರು “ಸುವರ್ಣ ಮಹೋತ್ಸವ ಪದ್ಮ ಸ್ಮರಣ” ಸಂಚಿಕೆ ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಮತ್ತು ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟರೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂದರು.

ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಲಾದ “ಶಿಕ್ಷಣದ ಸವಾಲುಗಳು ಮತ್ತು ಅವಕಾಶಗಳು”ಸಂವಾದದಲ್ಲಿ ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ  ಡಾ. ಜಯರಾಮ್ ಶೆಟ್ಟಿಗಾರ್ ರವರು” “ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಉನ್ನತ ಶಿಕ್ಷಣದ ಸವಾಲುಗಳು” ಕುರಿತು ವಿಚಾರ ಮಂಡನೆ ಮಾಡಿದರು.ಉನ್ನತ ಶಿಕ್ಷಣದಲ್ಲಿ NEP 2020 ಮೂಲಕ ಸೃಷ್ಟಿಯಾಗುವ ಅವಕಾಶಗಳು-ಎದುರಿಸುವ ಸವಾಲುಗಳು- ಬಹುಶಾಖಾ ದೃಷ್ಠಿಕೋನ ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳು ತಂತ್ರಜ್ಞಾನ ಸಂಯೋಜನೆ ಅಂತರರಾಷ್ಟ್ರೀಯೀಕರಣ ಶಿಕ್ಷಕರ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಗಳ ಸ್ವಾಯತ್ತತೆ ಮುಂತಾದ ಅವಕಾಶಗಳಿದ್ದರೂ ಕೂಡ ಬದಲಾವಣೆಗೆ ಪ್ರತಿರೋಧ ತರಬೇತಿದಾರರ ಕೊರತೆ ಹೇಗೆ ಅನೇಕ ಸವಾಲುಗಳು ಕೂಡ ಇದೆ ಎಂದು ಹೇಳಿದರು.

ಪರ್ಕಳ ಶಿವಾನಂದ ಶೆಟ್ಟಿಗಾರ್ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಶ್ರೀಮತಿ ಭಾನುಮತಿ, ಕಾರ್ಕಳದ ಶ್ರೀ ಮುದ್ರಾಡಿ, ಮುಂಬೈಯ ಶ್ರೀಮತಿ ರೇಷ್ಮಾ ರಾವ್, ಹಾಗೂ ಶ್ರೀಮತಿ ಶಿಲ್ಪ ಅವರು ಶಿಕ್ಷಣ ಕ್ಷೇತ್ರದ ಅವಕಾಶಗಳು ಮತ್ತು ಸವಾಲುಗಳ ಕುರಿತು ವಿಚಾರ ಮಂಡನೆ ಮಾಡಿದರು.

ನಾಲ್ವರಿಗೆ “ಪದ್ಮ ಸಾಧಕ” ಪ್ರಶಸ್ತಿ ಪ್ರದಾನ

ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಯುಜಿಸಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಪಿಎಚ್ ಡಿ ಪದವಿ ಪಡೆದ ಸಮಾಜದ ನಾಲ್ಕು ಜನ ಸಂಶೋಧಕರಿಗೆ “ಪದ್ಮಸಾಧಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಿಲಾಗ್ರೀಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ ಜಯರಾಮ ಶೆಟ್ಟಿಗಾರ್, ಅಂಕೋಲಾ ಗೋಖಲೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ವೆಂಕಟರಾಯ ಶೆಟ್ಟಿಗಾರ್ ಮಂಗಳೂರು ಬೆಸೆಂಟ್ ಕಾಲೇಜಿನ ಡಾ.ಲೋಕರಾಜ್ ಮುಂಬಯಿ ನರ್ಸಿಂಗ್ ಕಾಲೇಜಿನ ಡಾ ಶಿಲ್ಪ ಅಶೋಕ್ ಅವರಿಗೆ ಪದ್ಮಸಾಧಕ ಪ್ರಶಸ್ತಿ ನೀಡಲಾಯಿತು

ಇದೇ ಸಂದರ್ಭದಲ್ಲಿ ಶ್ರೀನಿವಾಸ ಸಾಫಲ್ಯರಿಗೆ” ಪದ್ಮಕಲಾ ತಪಸ್ವಿ” ಬಿರುದು ಪ್ರಧಾನ ಮಾಡಲಾಯಿತು.

ವೇದಿಕೆಯಲ್ಲಿ ಪದ್ಮಶಾಲಿ ಸಮಾಜ ಸೇವಾ ಸಂಘ ಅಧ್ಯಕ್ಷರು ಉತ್ತಮ್ ಎ. ಶೆಟ್ಟಿಗಾರ್, ಯುವ ವಿಭಾಗದ ಅಧ್ಯಕ್ಷ ಜಯೇಶ್ ಎ. ಶೆಟ್ಟಿಗಾರ್ ಉಪಸ್ಥಿತರಿದ್ದರು. ಬೆಳಿಗ್ಗೆ ಗುರು ವಂದನೆ, ಭಜನೆ, ಶಾಸ್ತ್ರೀಯ ನೃತ್ಯ, ಸ್ವಾಗತ ನೃತ್ಯ ನಡೆಯಿತು. ಪದ್ಮಶಾಲಿ ಎಜ್ಜುಕೇಶನ್ ಸೊಸಾಟಿ ನಡೆದು ಬಂದ ಹಾದಿ ಹಾಗೂ ಸಾಧನೆಯ ಬಗ್ಗೆ ಪದ್ಮಶಾಲಿ ಎಜುಕೇಶನ್ ಸೊಸ್ಕಾಟಿಯ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್ ತಿಳಿಸಿದರು. ಆ ಬಳಿಕ ಸಂಘದ ಹಾಗೂ ಸೊಸೈಟಿಯ ಉನ್ನತಿಗೆ ಸೇವೆಯನ್ನು ಸಲ್ಲಿಸಿರುವ ದಿ. ದಯಾನಂದ ಡಿ. ಶೆಟ್ಟಿಗಾರ್, ದಿ. ಎಸ್. ವಿ. ಗೋಪಾಲಕೃಷ್ಣ ಅವರಿಗೆ ಮರಣೋತ್ತರ ‘ಪದ್ಮ ರತ್ನ ‘ ಪುರಸ್ಕಾರವನ್ನು ನೀಡಲಾಯಿತು. ಈ ಪುರಸ್ಕಾರವನ್ನು ಶ್ವೇತಾ ಶೆಟ್ಟಿಗಾರ್ ಪರಿವಾರ ಮತ್ತು ರಾಘವೇಂದ್ರ ಹಾಗೂ ಸುಧೀಂದ್ರ ಸ್ವೀಕರಿಸಿದರು.

ಸ್ವರ ಶೆಟ್ಟಿಗಾರ್ ಸ್ವಾಗತಿಸಿದರು. ಶಿವಾನಂದ್ ಎಮ್. ಶೆಟ್ಟಿಗಾರ್ ಪರ್ಕಳ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಕಲಾವಿದರಿಂದ ‘ತಾಳಮದ್ದಲೆ’ ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಪದ್ಮಶಾಲಿ ಸಮಾಜ ಸೇವಾ ಸಂಘ ಅಧ್ಯಕ್ಷ ಉತ್ತಮ ಎ. ಶೆಟ್ಟಿಗಾರ್, ಉಪಾಧ್ಯಕ್ಷ ಕಿಶೋರ್ ಎಸ್. ಶೆಟ್ಟಿಗಾರ್, ಗೌರವ ಕಾರ್ಯದರ್ಶಿ ಲೀಲಾಧರ್ ಬಿ. ಶೆಟ್ಟಿಗಾರ್, ಜೊತೆ ಕಾರ್ಯದರ್ಶಿ ಕೇಶವ್ ವಿ. ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ನವೀನ್ ಎಂ. ಶೆಟ್ಟಿಗಾರ್, ಜೊತೆ ಕೋಶಾಧಿಕಾರಿ ಗಿರಿಧರ್ ಎಸ್. ಶೆಟ್ಟಿಗಾರ್ ಹಾಗೂ ಸಮಿತಿ ಸದಸ್ಯರು, ಸಲಹೆಗಾರರು ಕೆ. ಕೆ. ಪದ್ಮಶಾಲಿ, ಹಾಗೂ ಪದ್ಮಶಾಲಿ ಎಜುಕೇಶನ್ ಸೊಸಾಟಿ ಕಾರ್ಯಾಧ್ಯಕ್ಷ ಬಿ. ರಾಮಚಂದ್ರ ಶೆಟ್ಟಿಗಾರ್, ಗೌರವ ಕಾರ್ಯದರ್ಶಿ ರಮೇಶ್ ಪಿ. ಶೆಟ್ಟಿಗಾರ್, ಪದ್ಮಶಾಲಿ ಮಹಿಳಾ ಬಳಗ ಅಧ್ಯಕ್ಷೆ ಸರೋಜಿನಿ ಎಚ್. ಶೆಟ್ಟಿಗಾರ್, ಕಾರ್ಯದರ್ಶಿ ಉಷಾ ಎನ್. ಶೆಟ್ಟಿಗಾರ್, ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್, ಉಪಾಧ್ಯಕ್ಷರುಗಳಾದ ಶಿವಾನಂದ್ ಆರ್. ಶೆಟ್ಟಿಗಾರ್, ಯಶೋಧಾ ಎಚ್. ಶೆಟ್ಟಿಗಾರ್, ಯುವ ವಿಭಾಗದ ಜಯೇಶ್ ಶೆಟ್ಟಿಗಾರ್ ಇತರ ಎಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಪದ್ಮಶಾಲಿ ಎಜ್ಯುಕೇಶನ್ ಸೊಸಾಟಿಯ ಗೌ. ಕಾರ್ಯದರ್ಶಿ ರಮೇಶ್ ಪಿ. ಶೆಟ್ಟಿಗಾರ್ ಧನ್ಯವಾದಗೈದರು.

Related Articles

Back to top button
error: Content is protected !!