ಸಾಂಸ್ಕೃತಿಕ

ಮಹಾಕುಂಭಮೇಳದಿಂದ ಬಾಲಿವುಡ್‌ ಮಾಜಿ ನಟಿ,ಸಾಧ್ವಿ ಮಮತಾ ಕುಲಕರ್ಣಿ ಉಚ್ಛಾಟನೆ!

Views: 208

ಕನ್ನಡ ಕರಾವಳಿ ಸುದ್ದಿ: ಬಾಲಿವುಡ್‌ ಮಾಜಿ ನಟಿ, ಸನ್ಯಾಸಿನಿ ಮಮತಾ ಕುಲಕರ್ಣಿಗೆ ಕಿನ್ನರ ಅಖಾಡ ಬಿಗ್ ಶಾಕ್ ಕೊಟ್ಟಿದೆ. ಕಿನ್ನರ ಅಖಾಡದ ಮಹಾಮಂಡಳೇಶ್ವರ ಪಟ್ಟದಿಂದ ಉಚ್ಛಾಟನೆ ಮಾಡಲಾಗಿದೆ.

ಮಮತಾ ಕುಲಕರ್ಣಿ ಅವರು ಮಹಾಮಂಡಳೇಶ್ವರ ಪಟ್ಟಕ್ಕೆ ದೀಕ್ಷೆ ತೆಗೆದುಕೊಂಡ ಮೇಲೆ ಕಿನ್ನರ ಅಖಾಡ ವಿವಾದಕ್ಕೆ ಗುರಿಯಾಗಿತ್ತು. ಇದೀಗ ಮಮತಾ ಕುಲಕರ್ಣಿ ಹಾಗೂ ಲಕ್ಷ್ಮೀ ನಾರಾಯಣ ತ್ರಿಪಾಠಿ ಇಬ್ಬರನ್ನು ಕಿನ್ನರ ಅಖಾಡ ಉಚ್ಛಾಟನೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮಮತಾ ಕುಲಕರ್ಣಿಯನ್ನು ಮಹಾಮಂಡಳೇಶ್ವರಕ್ಕೆ ನೇಮಕ ಮಾಡಿದ್ದಕ್ಕೆ ಕಿನ್ನಾರ ಅಖಾಡದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಇಂದು ಮಮತಾ ಕುಲಕರ್ಣಿ ಅವರನ್ನು ಮಹಾಮಂಡಳೇಶ್ವರದಿಂದ ಉಚ್ಛಾಟನೆ ಮಾಡಿರುವುದಾಗಿ ಕಿನ್ನಾರ ಅಖಾಡದ ಸಂಸ್ಥಾಪಕ ರಿಷಿ ಅಜಯ್ ದಾಸ್ ಘೋಷಣೆ ಮಾಡಿದ್ದಾರೆ.

ಕಿನ್ನರ ಅಖಾಡದ ಸಂಸ್ಥಾಪಕರ ಈ ನಿರ್ಧಾರವನ್ನು ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರು ಖಂಡಿಸಿದ್ದಾರೆ. ಅಜಯ್ ದಾಸ್ ಅವರಿಗೆ ನಮ್ಮನ್ನು ಉಚ್ಛಾಟನೆ ಮಾಡುವ ಅಧಿಕಾರವೇ ಇಲ್ಲ ಎಂದು ಸೆಡ್ಡು ಹೊಡೆದಿದ್ದಾರೆ. ಕಿನ್ನಾರ ಅಖಾಡದಲ್ಲಿ ಮಹಾಮಂಡಳೇಶ್ವರ ದೀಕ್ಷೆ ಪಾರದರ್ಶಕವಾಗಿಯೇ ನಡೆದಿದೆ ಎಂದಿದ್ದಾರೆ. ಇನ್ನು ಕಿನ್ನಾರ ಅಖಾಡ ಈ ಉಚ್ಛಾಟನೆಯ ನಿರ್ಧಾರದ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿಯಿಂದ ಮಮತಾಕುಲಕರ್ಣಿ ಅವರು ದೀಕ್ಷೆ ಪಡೆದಿದ್ದರು. ಸನ್ಯಾಸತ್ವ ದೀಕ್ಷೆ ಪಡೆದ ಮಮತಾ ಕುಲಕರ್ಣಿ ತನ್ನದೇ ಪಿಂಡ ಪ್ರದಾನ ಮಾಡಿದ್ದರು. ಕಳೆದ 20 ದಿನಗಳಿಂದ ಮಹಾಕುಂಭಮೇಳದಲ್ಲಿದ್ದ ಮಮತಾ ಕುಲಕರ್ಣಿ ಅವರನ್ನು ಮಹಾಕುಂಭಮೇಳದಿಂದಲೇ ಉಚ್ಛಾಟನೆ ಮಾಡಲಾಗಿದೆ.

ಕಿನ್ನರ ಅಖಾಡ ಸ್ಥಾಪಕರಾದ ರಿಷಿ ಅಜಯ್ ದಾಸ್ ಅವರು ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡಕ್ಕೆ ಸೇರಿಸಿದ್ದಕ್ಕೆ ಮಹಾಮಂಡಲೇಶ್ವರ ಲಕ್ಷ್ಮಿನಾರಾಯಣ ತ್ರಿಪಾಠಿ ಅವರನ್ನು ವಜಾ ಮಾಡಿ ಆದೇಶ ನೀಡಿದ್ದಾರೆ.

90ರ ದಶಕದಲ್ಲಿ ಬಾಲಿವುಡ್ನಲ್ಲಿ ಮಿಂಚಿದ್ದ ಮಾಜಿ ನಟಿ ಮಮತಾ ಕುಲಕರ್ಣಿ ಅವರು ಕಿನ್ನರ ಅಖಾಡಕ್ಕೆ ಸೇರುವ ಮೂಲಕ ಮಹಾಮಂಡಲೇಶ್ವರಿಯಾಗಿದ್ರು. ‘ಮಾಯಿ ಮಮತಾ ನಂದಗಿರಿ’ ಎಂದು ಮಮತಾಗೆ ನಾಮಕರಣ ಮಾಡಲಾಗಿತ್ತು. ಕಳೆದ 2 ವರ್ಷದಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ ಕುಲಕರ್ಣಿ 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿದ್ದರು.

Related Articles

Back to top button