ಸಾಮಾಜಿಕ

ಮದುವೆಯಾಗಿ ಗಂಡನ ಮನೆಗೆ ಬಂದ ವಧು ಅತ್ತೆ ಮತ್ತು ಪತಿಗೆ ಮತ್ತು ಬರುವ ಔಷಧಿ ನೀಡಿ ರಾತ್ರೋರಾತ್ರಿ ಕಳ್ಳತನ 

Views: 159

ಕನ್ನಡ ಕರಾವಳಿ ಸುದ್ದಿ: ಮದುವೆಯಾಗಿ ಗಂಡನ ಮನೆಗೆ ಬಂದ ವಧು ಅತ್ತೆ ಮತ್ತು ಪತಿಗೆ ಮತ್ತು ಬರುವ ಔಷಧಿ ನೀಡಿ ರಾತ್ರೋರಾತ್ರಿ ನಗದು ಮತ್ತು ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ವಧು ತನ್ನ ಪತಿ ಮತ್ತು ಅತ್ತೆಗೆ ರಾತ್ರಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಹಾಲು ಕುಡಿಸಿ 1.30 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾಳೆ.

ಏನಿದು ಘಟನೆ?

ವಧು ಬಡತನ ಹಿನ್ನೆಲೆಯಿಂದ ಬಂದವಳಾಗಿದ್ದು, ಮದುವೆಯ ಖರ್ಚುಗಳಿಗೆ ಸಹಾಯ ಮಾಡಬೇಕು ಎಂದು ಹೇಳಿ ವರನ ಕುಟುಂಬದವರ ಬಳಿ 1.20 ಲಕ್ಷ ರೂ.ಗಳನ್ನು ಪಡೆದಿದ್ದಳು. ಮದುವೆಯ ಬಳಿಕ ಪತಿಯ ಮನೆಗೆ ಬಂದ ವಧು ರಾತ್ರಿ ತನ್ನ ಪತಿ ಮತ್ತು ಅತ್ತೆ ಇಬ್ಬರಿಗೂ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ ಹಾಲು ಕುಡಿಸಿ, ಅವರು ಪ್ರಜ್ಞೆ ತಪ್ಪಿದಾಗ, ವರನ ನಿಶ್ಚಿತಾರ್ಥದ ಉಂಗುರ ಮತ್ತು ಆತನ ತಾಯಿಯ ಕಾಲುಂಗುರ ಮತ್ತು ಮನೆಯಲ್ಲಿದ್ದ ಸರ ಸೇರಿದಂತೆ ನಗದು ಮತ್ತು ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ.

ಮರುದಿನ ಬೆಳಗ್ಗೆ, ಬೆಲೆಬಾಳುವ ವಸ್ತುಗಳು ಹಾಗೂ ವಧು ಕಾಣೆಯಾಗಿದ್ದನ್ನು ಕಂಡು ಕುಟುಂಬದವರಿಗೆ ಶಾಕ್ ಆಗಿದೆ. ಪೊಲೀಸ್ ದೂರು ನೀಡಿದ್ದಾರೆ. ವಧುವಿನ ಕಳ್ಳತನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೃತ್ಯಗಳನ್ನು ನಡೆಸುತ್ತಿರುವ ದೊಡ್ಡ ಗ್ಯಾಂಗ್ ಇದರಲ್ಲಿ ಭಾಗಿಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ ಮತ್ತು ಈಗ ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಬಲೆ ಬೀಸಿದ್ದಾರೆ.

Related Articles

Back to top button