ಮತ್ತೆ ಕರಾವಳಿಯಲ್ಲಿ ನಕ್ಸಲ್ ಓಡಾಟ? ತೀವ್ರ ಕಟ್ಟೆಚ್ಚರ!

Views: 60
ಉಡುಪಿ ಜಿಲ್ಲೆಯ ಬೈಂದೂರು ಸುತ್ತ ಮುತ್ತಲಿನ ಪರಿಸರದಲ್ಲಿ ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದು ಕೆಲವು ಮನೆ ಮನೆಗಳಿಗೆ ಬೇಟಿ ನೀಡಿದ್ದರು,ಇನ್ನು ಕೆಲವು ಮನೆಯುವರು ಭೇಟಿಗೆ ಅವಕಾಶ ನೀಡಲಿಲ್ಲ ಕೆಲವರನ್ನು ಮನೆಯಲ್ಲಿಯೇ ಮಾತನಾಡಿಸಿ ಹೋಗಿದ್ದಾರೆ.ಹಾಗೆಯೇ ಕೆಲವೊಂದು ಮನೆಗಳಿಗೆ ಸಂಚರಿಸಿದ್ದಾರೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಕೇರಳದಲ್ಲಿ ನಕ್ಸಲ್ ಚಟುವಟಿಕೆ ಪೊಲೀಸರಿಂದ ತೀವ್ರ ಕಾರ್ಯಾಚರಣೆ ಮೂಲಕ ಒತ್ತಡ ಬಂದ ಹಿನ್ನೆಲೆಯಲ್ಲಿ ನಕ್ಷಲರು ಈ ಭಾಗದಲ್ಲಿ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿರುವ ಅನುಮಾನ ದಟ್ಟವಾಗಿದೆ.
ಮಲೆನಾಡು,ಕರಾವಳಿಯಲ್ಲಿ ನಕ್ಸಲ್ ಚಟುವಟಿಕೆ ಮತ್ತು ಅವರ ಚಲನವಲನ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆಯ ಬೈಂದೂರು ಕೆಲವೊಂದು. ಪ್ರದೇಶದಲ್ಲಿ ತೀವ್ರ ಎಚ್ಚರಿಕೆ ವಹಿಸುವಂತೆ ನಕ್ಸಲ್ ವಿಗ್ರಹ ನಿಗ್ರಹ ಪಡೆ (ಐಎನ್ಎಫ್ )ಗೆ ಸೂಚಿಸಲಾಗಿದೆ.
ಕೇರಳ ಮತ್ತು ಚಿಕ್ಕಮಗಳೂರಿನಿಂದ ನಕ್ಸಲರು ಉಡುಪಿ ಜಿಲ್ಲೆಗೆ ಆಗಮಿಸಿರುವ ಶಂಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿನ ಬಳಿಕ ವಿಕ್ರಂ ಗೌಡ ತಲೆಮರೆಸಿಕೊಂಡಿದ್ದು ಇದೀಗ ನಕ್ಸಲ್ ನಾಯಕ ವಿಕ್ರಂಗೌಡ ಹಾಗೂ ಆತನ ಸಹಚರರು ಕರಾವಳಿ ಜಿಲ್ಲೆಗಳಲ್ಲಿ ಓಡಾಟ ನಡೆಸುತ್ತಿರುವುದಾಗಿ ಸ್ಥಳೀಯರ ಮಾಹಿತಿ ಮೇರೆಗೆ ಬಿಗಿ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ.
ಬೈಂದೂರು ತಾಲೂಕಿನ ಕೊಲ್ಲೂರು ಮುದೂರು, ಜಡ್ಕಲ್, ಬೆಳ್ಕಲ್ ಸುತ್ತಮುತ್ತ ನಕ್ಸಲ್ ಓಡಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕೂಂಬಿಂಗ್ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಯಲಾಗಿದೆ.