ಇತರೆ

ಮಗುವಿಗೆ ಜನ್ಮ ನೀಡಿ ಮಗುವನ್ನು ಮುದ್ದಾಡುವ ಹೊತ್ತಲ್ಲಿ ಚಿರನಿದ್ರೆಗೆ ಜಾರಿದ ಬಾಣಂತಿ   

Views: 93

ಚಿಕ್ಕಮಗಳೂರು, ಹುಟ್ಟುವ ಮಗುವಿಗಾಗಿ ನೂರಾರು ಕನಸುಗಳನ್ನು ಕಂಡು 9 ತಿಂಗಳ ಕಾಲ ಹೊತ್ತು,ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದ ಬಾಣಂತಿ ಮಗುವನ್ನು ಮುದ್ದಾಡುವ ಹೊತ್ತಲ್ಲಿ ಚಿರನಿದ್ರೆಗೆ ಜಾರಿ ಮೃತಪಟ್ಟ ದಾರುಣ ಘಟನೆ ನಡೆದಿದ್ದು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಂಜಿತ ಬಾಯಿ (21) ರಾತ್ರಿ ಸಾವನ್ನಪ್ಪಿರುವ ಘಟನೆ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡ ಕಾರಣಕ್ಕೆ ರಂಜಿತ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು,ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ರಂಜಿತಾ ಜನ್ಮ ನೀಡಿದ್ದಳು. ರಾತ್ರಿ ಏಕಾಏಕಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳಿದರೂ ಯಾವೊಬ್ಬ ಸಿಬ್ಬಂದಿಯು ಚಿಕಿತ್ಸೆ ನೀಡಿಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತಪಟ್ಟಿದ್ದಾಗಿ ಆರೋಪಗಳು ಕೇಳಿ ಬಂದಿದೆ. ಸಖರಾಯಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ರಂಜಿತ ವರ್ಷದ ಹಿಂದೆ ಶಶಿಧರ್ ನಾಯಕ್ ಎಂಬವರನ್ನು ಮದುವೆಯಾಗಿದ್ದಳು. ಇದೀಗ ವೈದ್ಯರ ಕಾರಣಕ್ಕೆ ತಾಯಿ ಮೃತಪಟ್ಟಿದ್ದು ಮಗು ಅನಾಥವಾಗಿದೆ.

Related Articles

Back to top button