ಕರಾವಳಿ
ಮಗಳ ಮದುವೆ ತಯಾರಿಗೆ ಊರಿಗೆ ಬರಬೇಕಾದ ಕೋಟದ ವ್ಯಕ್ತಿ ಕುವೈಟ್‌ನಲ್ಲಿ ಹೃದಯಾಘಾತದಿಂದ ಸಾವು

Views: 70
ಉಡುಪಿ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ದಿ.ಜಿ. ಕೆ. ಹಸನಬ್ಬ ಅವರ ಪುತ್ರ ಜಲಾಲ್ (55) ಕುವೈಟ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಕೆಲವು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು, ಮಗಳ ಮದುವೆಗಾಗಿ ಇನ್ನೇನು ಕೆಲವೇ ದಿನದಲ್ಲಿ ಊರಿಗೆ ಬರುವ ತಯಾರಿಯಲ್ಲಿದ್ದರು. ಈ ನಡುವೆ ಕುವೈಟ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಊರಿನಲ್ಲಿ ಮದುವೆ ತಯಾರಿಯಲ್ಲಿದ್ದ ಮನೆಯವರು ಅಘಾತ ಗೊಂಡಿದ್ದಾರೆ. ಸೋಮವಾರ ಮೃತದೇಹ ತಾಯ್ನಾಡಿಗೆ ತಲುಪಲಿದೆ ಎಂದು ತಿಳಿದು ಬಂದಿದೆ.