ಆರ್ಥಿಕ

ಮಗಳ ಮದುವೆಗೆಂದು ಲಾಕರ್​​ನಲ್ಲಿ ಇಟ್ಟಿದ್ದ 18 ಲಕ್ಷ ರೂ. ಮೌಲ್ಯದ ನೋಟುಗಳಿಗೆ ಗೆದ್ದಲು

Views: 119

ಉತ್ತರಪ್ರದೇಶ: ಮೊರಾದಾಬಾದ್​ನ ಮಹಿಳೆಯೊಬ್ಬರು ತಮ್ಮ ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿ 18 ಲಕ್ಷ ರೂ. ಇಟ್ಟಿದ್ದರು. ಬ್ಯಾಂಕ್​ಗೆ ಬಂದು ಲಾಕರ್ ಅನ್ನು ಓಪನ್​ ಮಾಡಿದಾಗ ಆಕೆಗೆ ದೊಡ್ಡ ಆಘಾತವಾಗಿದೆ.

ಯುಪಿಯಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮದುವೆಗಾಗಿ 2022ರ ಅಕ್ಟೋಬರ್‌ನಲ್ಲಿ ಬರೋಡಾದ ಆಶಿಯಾನಾ ಶಾಖೆಯಲ್ಲಿ ಬ್ಯಾಂಕ್ ಲಾಕರ್‌ನಲ್ಲಿ ಹಣದ ಜತೆಗೆ ಕೆಲವು ಆಭರಣಗಳನ್ನು ಇಟ್ಟಿದ್ದರು. 18 ಲಕ್ಷ ರೂಪಾಯಿ ಹಣವನ್ನು ಲಾಕರ್‌ನಲ್ಲಿ ಇರಿಸಿದ್ದರು. ಇತ್ತೀಚೆಗಷ್ಟೇ ಮಹಿಳೆಯನ್ನು ಸಂಪರ್ಕಿಸಿದ ಬ್ಯಾಂಕ್​ ಸಿಬ್ಬಂದಿ ಲಾಕರ್‌ ಒಪ್ಪಂದವನ್ನು ರಿನಿವಲ್​ ಮಾಡಲು ಮತ್ತು ಕೆವೈಸಿ ಮಾಹಿತಿ ಅಪ್​ಡೇಟ್​ ಮಾಡಲು ಶಾಖೆಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.

ಲಾಕರ್ ತೆರೆದು ನೋಡಿದಾಗ ತನ್ನ ಬಳಿಯಿದ್ದ ನೋಟುಗಳೆಲ್ಲ ಗೆದ್ದಲು ತಿಂದು ನಾಶವಾಗಿರುವುದನ್ನು ಕಂಡು ಬೆಚ್ಚಿಬಿದ್ದಳು. ಅಲ್ಕಾ ಕೂಡಲೇ ಬ್ಯಾಂಕ್ ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದರು. ಇದರಿಂದ ಬ್ಯಾಂಕ್‌ನಲ್ಲಿ ಆತಂಕ ಶುರುವಾಗಿದೆ. ಬ್ಯಾಂಕ್ ಆಫ್ ಬರೋಡಾ ಪ್ರಧಾನ ಕಚೇರಿಗೆ ವರದಿಯನ್ನು ಕಳುಹಿಸಿರುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.

ಸಣ್ಣ ವ್ಯಾಪಾರ ಮತ್ತು ಟ್ಯೂಷನ್ ತರಗತಿಗಳನ್ನು ನಡೆಸುತ್ತಿರುವ ಅಲ್ಕಾ ಪಾಠಕ್ ಅವರು ತಮ್ಮ ಉಳಿತಾಯವನ್ನು ನಗದು ಮತ್ತು ಆಭರಣಗಳ ರೂಪದಲ್ಲಿ ಲಾಕರ್‌ನಲ್ಲಿ ಇಟ್ಟಿದ್ದರು. ಮಗಳ ಮದುವೆಗೆಂದು ಕೆಲವು ಬೆಲೆಬಾಳುವ ಆಭರಣಗಳ ಜತೆಗೆ ಸುಮಾರು 18 ಲಕ್ಷ ರೂ. ಲಾಕ್​​ನಲ್ಲಿ ಇಟ್ಟಿದ್ದರು.

ಬ್ಯಾಂಕ್ ಅಧಿಕಾರಿಗಳು ನನ್ನೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎಂದು ಅಲ್ಕಾ ಪಾಠಕ್ ಆರೋಪಿಸಿದ್ದಾರೆ. “ಒಂದು ವೇಳೆ ನನಗೆ ಬ್ಯಾಂಕ್​ ಪ್ರತಿಕ್ರಿಯೆ ಮತ್ತು ಬೆಂಬಲವನ್ನು ನೀಡದಿದ್ದರೆ ನಾನು ಮಾಧ್ಯಮಗಳ ಸಹಾಯ ಪಡೆಯುತ್ತೇನೆ” ಎಂದು ಅವರು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ತಂದ ಇತ್ತೀಚಿನ ನಿಯಮಗಳು ಬ್ಯಾಂಕ್ ಲಾಕರ್‌ಗಳಲ್ಲಿ ಯಾವುದೇ ಹಣವನ್ನು ಸಂಗ್ರಹಿಸುವುದನ್ನು ನಿಷೇಧಿಸುತ್ತದೆ.

Related Articles

Back to top button