ಆರ್ಥಿಕ

ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ: ಬಂದೂಕು ತೋರಿಸಿ ಹಣ, ಚಿನ್ನಾಭರಣ ಲೂಟಿ 

Views: 624

ಕನ್ನಡ ಕರಾವಳಿ ಸುದ್ದಿ: ಮಂಗಳೂರಿನಲ್ಲಿ ದರೋಡೆ ಪ್ರಕರಣ ವರದಿಯಾಗಿದ್ದು. ಹಾಡಹಗಲೇ ಆಘಂತುಕರು ಬಂದೂಕು ತೋರಿಸಿ ಬ್ಯಾಂಕ್ ನಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿದಿದ್ದಾರೆ.

ಮಂಗಳೂರಿನ ಕೆ.ಸಿ ರೋಡ್ ಶಾಖೆಯ ಕೋಟೆಕಾರು ಸಹಕಾರಿ ಬ್ಯಾಂಕಿನಲ್ಲಿ ದರೋಡೆಯಾಗಿದ್ದು. ಹಾಡಹಗಲೇ ಬ್ಯಾಂಕ್ಗೆ ನುಗ್ಗಿದ ಐವರು ಆಘಂತುಕರು ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ. ಫಿಯೆಟ್ ಕಾರಿನಲ್ಲಿ ಬಂದಿದ್ದ ದರೋಡೆಕೋರರಿಂದ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.

ಬಂದೂಕು ತೋರಿಸಿ ದರೋಡೆ ಮಾಡಿರುವ ಈ ಗ್ಯಾಂಗ್ ಬ್ಯಾಂಕ್ನಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗ್ಯಾಂಗ್‌ ನಲ್ಲಿ ಆರು ಜನರಿದ್ದು, ಐವರು ಬ್ಯಾಂಕ್‌ ಗೆ ನುಗ್ಗಿ ಓರ್ವ ರಸ್ತೆಯಲ್ಲಿದ್ದ. ಪಿಸ್ತೂಲು ಮತ್ತು ತಲವಾರು ತೋರಿಸಿದ ಗ್ಯಾಂಗ್‌ ಬ್ಯಾಂಕ್‌ ನಿಂದ ಸುಮಾರು ಐದು ಲಕ್ಷ ರೂ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದೆ. ಒಟ್ಟು ಹತ್ತು ಕೋಟಿ ರೂ ಮೌಲ್ಯದ ದರೋಡೆ ಮಾಡಲಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಬ್ಯಾಂಕ್‌ ಕಚೇರಿ ಮೊದಲ ಮಹಡಿಯಲ್ಲಿದೆ. ಕಟ್ಟಡದ ಕೆಳಗಿನ ಭಾಗದಲ್ಲಿದ್ದ ಬೇಕರಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು. ಬ್ಯಾಂಕ್‌ ನ ಗಲಾಟೆ ಕೇಳಿ ಮೊದಲ ಮಹಡಿಗೆ ಬಂದ ವಿದ್ಯಾರ್ಥಿಗಳಿಗೆ ಆಗಂತುಕರು ಪಿಸ್ತೂಲು ತಲವಾರ್‌ ತೋರಿಸಿ ಓಡಿಸಿದ್ದಾರೆ. ಅಗ ಕೆಳಕ್ಕೆ ಬಂದ ಹುಡುಗರು ಬೊಬ್ಬೆ ಹಾಕಿದ್ದಾರೆ.

ದರೋಡೆ ನಡೆಸಿ ಹಳೆಯ ಪೀಯಾಟ್‌ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ. ದರೋಡೆಕೋರರು ಕನ್ನಡ ಮಾತನಾಡುತ್ತಿದ್ದರು ಎನ್ನಲಾಗಿದೆ.

 

Related Articles

Back to top button