ಜನಮನ
ಭಾರತದ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದು ಉರುಳಿಸಿದ ಯೋಧರು

Views: 0
ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದ ಭೂಪ್ರದೇಶಕ್ಕೆ ನುಗ್ಗಿದ ಪಾಕಿಸ್ತಾನದ ಡ್ರೋನ್ ಗಡಿ ಭದ್ರತಾ ಪಡೆ( ಬಿಎಸ್ಎಫ್) ಯೋಧರು ಹೊಡೆದು ಉರುಳಿಸಿದ್ದಾರೆ.
ಶುಕ್ರವಾರ ರಾತ್ರಿ ಡ್ರೋನ್ ಗಮನಿಸಿದ ಬಿಎಸ್ಎಫ್ ಯೋಧರು ತಕ್ಷಣವೇ ತಡೆಹಿಡಿಯಲು ಪ್ರಯತ್ನಿಸಿದ್ದು. ಶನಿವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಲಖನಾ ಪ್ರದೇಶದಲ್ಲಿ ಹೊಡೆದು ಉರುಳಿಸಲಾಗಿದೆ.
ಪಾಕಿಸ್ತಾನದ ನೀಚ ಕೆಲಸಗಳನ್ನು ಬಿಎಸ್ಎಫ್ ವಿಫಲಗೊಳಿಸಿದೆ. ಎಂದು ಭದ್ರತಾ ಪಡೆಗಳು ತಿಳಿಸಿವೆ.
ಇದಕ್ಕೂ ಮೊದಲು ಜೂನ್ 22 ರಂದು ಪಂಜಾಬಿನ ಪ್ರದೇಶದಲ್ಲಿನ ಪಾಕ್ ಕಡೆಯಿಂದ ಡ್ರೋನ್ ನಲ್ಲಿ ಶಂಕಿತ ಉಗ್ರರು ಮಾದಕ ವಸ್ತುಗಳ ಕೆಲವು ಪ್ಯಾಕೆಟ್ ಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ.