ಇತರೆ
ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ಸಿಬ್ಬಂದಿ ಅಪಘಾತದಿಂದ ಮೃತ್ಯು

Views: 3
ಬ್ರಹ್ಮಾವರ: ಬೈಕ್ ಸ್ಕಿಡ್ ಆಗಿ ಸಹ ಸಹಸವಾರೆ ಕ್ರಾಸ್ ಲ್ಯಾಂಡ್ ಕಾಲೇಜಿನ ಸಿಬ್ಬಂದಿ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಬ್ರಹ್ಮಾವರ ಹೆಬ್ರಿ ರಸ್ತೆ ಕೊಳಂಬೆಯಲ್ಲಿ ಅಪಘಾತ ನಡೆದಿದೆ.
ಬೈಕ್ ಸವಾರ ಸುಧೀಂದ್ರ( 39) ಹಾಗೂ ಕೋಟೇಶ್ವರ ನಿವಾಸಿ ಶಾಂಭವಿ( 59 ) ಬ್ರಹ್ಮಾವರದ ಕಾಲೇಜಿನ ಲ್ಯಾಬ್ ಟೆಕ್ನಿಷಿಯನ್ ಹಾಗೂ ಲೈಬ್ರರಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಅವರು ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಆಯತಪ್ಪಿ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.