ಸಾಂಸ್ಕೃತಿಕ
ಬೈಕ್ ಸ್ಕಿಡ್ ಆಗಿ ಬಿದ್ದು ಯಕ್ಷಗಾನ ಮೇಳದ ಮದ್ದಳೆಗಾರ ಸಾವು

Views: 176
ಕನ್ನಡ ಕರಾವಳಿ ಸುದ್ದಿ: ಹಟ್ಟಿಯಂಗಡಿ ಮೇಳದ ಮದ್ದಳೆಗಾರರೊಬ್ಬರು ಅರಾಟೆ ಸೇತುವೆ ಬಳಿ ಸೇತುವೆ ದುರಸ್ಥಿ ಕಾಮಗಾರಿಗೆ ಹಾಕಲಾಗಿದ್ದ ಮಣ್ಣಿನ ರಾಶಿಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಹಟ್ಟಿಯಂಗಡಿ ಮೇಳದ ಮದ್ದಳೆಗಾರ ನಾರಾಯಣ ಪೂಜಾರಿ (40)
ಶಿರೂರಿನ ತೂದಳ್ಳಿಯಲ್ಲಿ ನಡೆಯಬೇಕಿದ್ದ ಹಟ್ಟಿಯಂಗಡಿ ಮೇಳದ ಆಟ ಮಳೆ ಬಂದ ಕಾರಣದಿಂದ ಅನಿವಾರ್ಯವಾಗಿ ರದ್ದಾಗಿತ್ತು. ಆ ಕಾರಣದಿಂದ ಮೇಳದ ಪ್ರಧಾನ ಮದ್ದಳೆಗಾರ ಅವರು ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು.
ಈ ಸಂದರ್ಭ ಅರಾಟೆ ಸೇತುವೆ ಬಳಿ ದುರಸ್ತಿಗಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು ಗೊಂದಲಕ್ಕೆ ಒಳಗಾದ ನಾರಾಯಣ ಪೂಜಾರಿ ಅವರು ದ್ವಿಮುಖ ಸಂಚಾರ ರಸ್ತೆಯಲ್ಲಿ ಬರುತ್ತಿದ್ದಾಗ ಅಡ್ಡ ಹಾಕಿದ ಮಣ್ಣಿನ ರಾಶಿಗೆ ಗುದ್ದಿ ಬೈಕ್ ನಿಯಂತ್ರಣ ಕಳೆದುಕೊಂಡು ಬಿದ್ದು ಮೃತಪಟ್ಟಿದ್ದಾರೆ.
ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.