ಯುವಜನ

ಬೈಕ್ ನಿಂದ ಬಿದ್ದು ಸಾವು..12 ಜನರಿಗೆ ಅಂಗಾಂಗ ದಾನ ಮಾಡಿ ಬಾಳು ಬೆಳಗಿಸಿದ ಡಾ.ಸಂಧ್ಯಾ

Views: 183

ಕನ್ನಡ ಕರಾವಳಿ ಸುದ್ದಿ: ಡಾ.ಸಂಧ್ಯಾ ಅವರು ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದರು. ದುರದೃಷ್ಟರ ಎಂಬುವಂತೆ ಅವರಿಗೆ ಬಸ್ ಮಿಸ್ ಆಗಿ ತಂದೆಯ ಬೈಕ್ ನಲ್ಲಿ ಡ್ರಾಪ್ ತೆಗೆದುಕೊಂಡಿರುತ್ತಾರೆ. ಬೈಕ್ ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸಿದೇ ಹಿಂದೆ ಕುಳಿತುಕೊಂಡಾಗ ಕೋಲಾರದ ಕೆಜಿಎಫ್ ನಲ್ಲಿ ಆಕಸ್ಮಿಕವಾಗಿ ಕೆಳಕ್ಕೆ ಬೀಳುತ್ತಾರೆ. ಸ್ಥಳೀಯರ ಸಹಾಯದಿಂದ ತಕ್ಷಣ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಬೈಕ್ ನಲ್ಲಿರುವಾಗ ಹೆಲ್ಮೆಟ್ ಧರಿಸದೇ ಇದ್ದಿದ್ದಕ್ಕೆ ಸಂಧ್ಯಾ ತಲೆಗೆ ಬಲವಾದ ಗಾಯಗಳು ಆಗಿ ಬ್ರೈನ್ ಪ್ರಾಬ್ಲಂ ಆಗಿರುತ್ತದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ.

ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂಧ್ಯಾ ಕೊನೆಯುಸಿರೆಳೆಯುತ್ತಾರೆ. ಮಗಳ ದೇಹವನ್ನು ಮಣ್ಣಿಗೆ ಹಾಕಲು ಇಷ್ಟ ಇಲ್ಲದೆ ಇಡೀ ದೇಹವನ್ನು ದಾನ ಮಾಡಲು ಪೋಷಕರು ಮುಂದಾಗಿದ್ದರು. ಹೀಗಾಗಿಯೇ ಬಿಜಿಎಸ್, ಜಾಲಪ್ಪ ಆಸ್ಪತ್ರೆ ಅಧಿಕಾರಿಗಳ ಜೊತೆ ಈ ಕುರಿತು ಮಾತನಾಡಿದ್ದರು.

ಹೀಗಾಗಿ ಆಸ್ಪತ್ರೆಗೆ ಮಗಳ 12 ಅಂಗಾಂಗ ದಾನ ಮಾಡಿ ಮಣ್ಣು ಮಾಡಿದೇವು. ಇಂದು ನನ್ನ ಮಗಳಿಂದ 12 ಕುಟುಂಬಸ್ಥರು ಖುಷಿಯಾಗಿದ್ದಾರೆ. ಇದರಿಂದ ನನಗೂ, ನನ್ನ ಇನ್ನೊಬ್ಬಳು ಮಗಳಿಗೆ ಒಳ್ಳೆದಾಗುತ್ತದೆ ಎಂದು ಭಾವಿಸಿದ್ದೇವೆ ಎಂದು ಸಂಧ್ಯಾ ತಾಯಿ ಹೇಳಿದ್ದಾರೆ.

Related Articles

Back to top button