ವಿವಾಹಿತೆ ಬ್ಲಾಕ್ ಮೇಲ್: ಜಿಮ್ ಟ್ರೈನರ್ ಯುವಕ ಸೂಸೈಡ್
Views: 139
ಕನ್ನಡ ಕರಾವಳಿ ಸುದ್ದಿ: ಜಿಮ್ ನಲ್ಲಿ ಬೆಳೆದ ಸಲುಗೆ ಇದೀಗ ಸಾವಿನ ಹಂತಕ್ಕೆ ತಂದು ನಿಲ್ಲಿಸಿದೆ. ನೆಲಮಂಗಲದಲ್ಲಿ ವಿವಾಹಿತೆಯೊಬ್ಬಳ ಬ್ಲಾಕ್‌ಮೇಲ್‌ಗೆ ಸಿಲುಕಿ ಯುವಕ ಪ್ರಾಣ ಬಿಟ್ಟಿರುವ ಆರೋಪ ಕೇಳಿಬಂದಿದೆ.
ಅನುಮಾನಾಸ್ಪದವಾಗಿ ಸಾವಿಗೆ ಶರಣಾಗಿದ್ದಾನೆ. 28 ವರ್ಷದ ದಿಲೀಪ್ ವಿವಾಹಿತೆ ಮಹಿಳೆಗೆ ಕರೆ ಮಾಡಿ ಜೀವ ಬಿಟ್ಟಿದ್ದಾನೆ.
ನೆಲಮಂಗಲದ ವಾಜರಹಳ್ಳಿಯ ವಿಶ್ವಶಾಂತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಬೇಸರದಲ್ಲೇ ಮನೆಗೆ ಬಂದ ದಿಲೀಪ್ ರೂಮ್ ಸೇರಿಕೊಂಡಿದ್ದಾನೆ. ಬಳಿಕ ದಿಲೀಪ್ ಸಹೋದರಿಗೆ ಇನ್ಸ್ಟಾಗ್ರಾಂ ಮೂಲಕ ಯೋಗಿತಾ ಎಂಬ ಮಹಿಳೆಯಿಂದ ಮೆಸೇಜ್ ಬಂದಿದೆ. ನಿನ್ನ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾನೆ, ಕಾಪಾಡಿಕೊಳ್ಳಿ ಎಂದು ಮೆಸೇಜ್ ಎಂದು ಬಂದಿದೆ. ಗಾಬರಿಗೊಂಡ ಕುಟುಂಬಸ್ಥರು ಬಾಗಿಲು ಹೊಡೆದು ನೋಡಿದಾಗ, ದಿಲೀಪ್ ನೇಣಿನ ಕುಣಿಕೆಯಲ್ಲಿರುವುದು ಕಂಡಿದೆ.
ಜಿಮ್ ಅಲ್ಲಿ ದಿಲೀಪ್ ಗೆ 42 ವರ್ಷದ ವಿವಾಹಿತ ಮಹಿಳೆ ಯೋಗಿತಾ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಸಲುಗೆ ಬೆಳೆದಿದೆ. ಮದುವೆ ಆಗಿದ್ರು ಕೂಡ ಮಹಿಳೆ ದಿಲೀಪ್ ಜೊತೆ ಸಂಬಂಧ ಬೆಳೆಸಿ ಹಣ ಹಾಗೂ ಮನೆಗಾಗಿ ಬ್ಲಾಕ್ ಮೇಲ್ ಮಾಡುತಿದ್ದ ಬಗ್ಗೆ ಪೋಷಕರು ಆರೋಪಿಸಿದ್ದಾರೆ. ಈ ಮುಂಚೆ ಇದೇ ವಿಷಯಕ್ಕೆ ಒಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿ, ಮಹಿಳೆ ಯೋಗಿತಾ ಪತಿಯ ಸಮ್ಮುಖದಲ್ಲಿ ಕುಟುಂಬಸ್ಥರು ಸಂಧಾನ ಕೂಡ ಮಾಡಿದ್ದರಂತೆ. ಆದರೂ ಕೂಡ ನನ್ನ ಮಗನನ್ನ ಹೆದರಿಸಿ ಬೆದರಿಸಿ, ನೇಣಿಗೆ ಶರಣಾಗುವಂತೆ ಮಾಡಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ನೆಲಮಂಗಲ ಪೊಲೀಸರು ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತಾ, ಮದುವೆ ವಯಸ್ಸಿಗೆ ಬಂದಿದ್ದ ಮಗನನ್ನ ನಮ್ಮಿಂದ ಬಾರದ ಲೋಕಕ್ಕೆ ದೂರ ಮಾಡಿದ್ದಾರೆ, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಿ ಅಂತಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.






