ಇತರೆ

ಬೈಕ್-ಕಾರು ಡಿಕ್ಕಿ: ಏರೋನಾಟಿಕಲ್ ಇಂಜಿನಿಯರ್ ಸಾವು 

Views: 74

ಕನ್ನಡ ಕರಾವಳಿ ಸುದ್ದಿ: ಬೈಕ್ ಗೆ ಕಾರು ಡಿಕ್ಕಿಯಾಗಿ ಯುವತಿ ಮೃತಪಟ್ಟಿರೋ ಘಟನೆ ಬಾಗಲೂರು ರಸ್ತೆಯ ಕೆಐಎಡಿಬಿ ಜಂಕ್ಷನ್ನಲ್ಲಿ ನಡೆದಿದೆ. ನಂದಿನಿ (24) ಮೃತ ಯುವತಿ.

ಮೃತ ನಂದಿನಿ ಏರೋನಾಟಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ನೆಲಮಂಗಲದ ಹುಸ್ಕೂರು ಗ್ರಾಮದ ಯುವತಿ ನಗರದ ಬಾಗಲೂರಿನಲ್ಲಿ ವಾಸವಿದ್ದಳು. ಸಂಜೆ ವೇಳೆ ಕೆಲಸ ಮುಗಿಸಿ ಪಿಜಿಗೆ ಹಿಂದಿರುಗುವಾಗ ಫಾರ್ಚೂನರ್ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ನಂದಿನಿ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಯುವತಿ ಉಸಿರು ನಿಲ್ಲಿಸಿದ್ದಾಳೆ. ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.

Related Articles

Back to top button