ಬೈಂದೂರು : ಬಿಜೆಪಿ ಮಹಿಳಾ ಮೋಚಾ೯ ಸಮಾವೇಶ

Views: 0
ಕುಂದಾಪುರ : ಬಿಜೆಪಿ ಕಳೆದ ಅವಧಿಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮಾಡಿದ ಅಭಿವೃದ್ಧಿಯನ್ನು ನೋಡಿ ಯಾರು ಉತ್ತಮರು ಎನ್ನುವುದನ್ನು ಯೋಚಿಸಿ ಮತ ನೀಡಿ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಅವರು ಬಿಜೆಪಿ ಮಹಿಳಾ ಮೋಚಾ೯ ಬೈಂದೂರು ಮಂಡಲದಿಂದ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.
ಮಾಜಿ ಸಚಿವ ಪ್ರಮೋದ ಮದ್ವರಾಜ್ ಮಾತನಾಡಿ, ನವ ಚೈತನ್ಯದ ಕಾಯ೯ಕತ೯, ಬಿಜೆಪಿಯ ಸಾಮಾನ್ಯ ಕಾಯ೯ಕತ೯ ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟಿಹೊಳೆಯನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದರು.
ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟಿಹೊಳೆ ಮಾತನಾಡಿ, ಈ ಕ್ಷೇತ್ರದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ಚಿತ್ರ ನಟಿ ತಾರಾ, ಗೋವಿಂದ ಬಾಬು ಪೂಜಾರಿ, ಬೈಂದೂರು ಮಂಡಲದ ಉಸ್ತುವಾರಿ ಬಿಜೇಶ್ ಚೌಟ, ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಮಹಿಳಾ ಮೋಚಾ೯ ಅಧ್ಯಕ್ಷೆ ವೀಣಾ ಶೆಟ್ಟಿ, ಬೈಂದೂರು ಬಿಜೆಪಿ ಅಧ್ಯಕ್ಷೆ ಬಾಗೀರಥಿ ಸುರೇಶ್, ದೀಪ , ಶೋಭಾ. ಜಿ ಪುತ್ರನ್, ಮಂಡಲದ ಪ್ರಧಾನ ಕಾಯ೯ದಶಿ೯ ಪ್ರಿಯದಶಿ೯ನಿ ದೇವಾಡಿಗ, ಅನಿತಾ. ಆರ್. ಕೆ ಇದ್ದರು.