ಬಿಜೆಪಿಯ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರು ಘೋಷಣೆ

Views: 77
2024ರ ಲೋಕಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಹೀಗಿರುವಾಗ ಬಿಜೆಪಿ ಮೊದಲ ಪಟ್ಟಿಯನ್ನು ರಿಲೀಸ್ ಮಾಡುವ ಮೂಲಕ ವಿರೋಧ ಪಕ್ಷಕ್ಕೆ ಅಚ್ಚರಿ ಮೂಡಿಸಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ಆರಂಭವಾಗಿದ್ದು, ಮೊದಲ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ
ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆಯಿಂದ ಮೊದಲ ಪಟ್ಟಿ ಘೋಷಣೆಯಾಗಿದೆ. 195 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ. ಇದರಲ್ಲಿ 16 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಕ್ಷೇತ್ರದ ಬಗ್ಗೆ ನಿರ್ಧರಿಸಲಾಗಿದೆ
ಬಿಜೆಪಿ ಪಕ್ಷ ರಿಲೀಸ್ ಮಾಡಿದ ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರ ಹೆಸರಿದೆ. ಮಾತ್ರವಲ್ಲದೆ, 28 ಮಹಿಳೆಯರ ಹೆಸರು ಮತ್ತು 50 ಕ್ಕಿಂತ ಕಡಿಮೆ ವಯಸ್ಸಿನ 47 ಜನರ ಹೆಸರನ್ನು ಘೋಷಣೆ ಮಾಡಿದೆ
ಲೋಕಸಭಾ ಚುನಾವಣೆಗಾಗಿ ಸ್ಫರ್ಧಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಮೊದಲಿದೆ. ವಾರಣಾಸಿಯಿಂದ ಮೋದಿ ಸ್ಪರ್ಧಿಸುವುದಾಗಿ ಪಟ್ಟಿಯಲ್ಲಿ ಹೇಳಿದ್ದಾರೆ
ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು
ಉತ್ತರ ಪ್ರದೇಶದ 51 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಇನ್ನು ಕೇರಳ 12 ಕ್ಷೇತ್ರಗಳು, ತೆಲಂಗಾಣ 9 ಕ್ಷೇತ್ರಗಳು, ಅಸ್ಸಾಂ 11 ಕ್ಷೇತ್ರಗಳನ್ನು ಘೋಷಣೆ ಮಾಡಿವೆ. ರಾಜಸ್ಥಾನ 15 ಕ್ಷೇತ್ರಗಳು, ಮಧ್ಯಪ್ರದೇಶ 24 ಕ್ಷೇತ್ರಗಳು, ತ್ರಿಪುರಾ 1 ಕ್ಷೇತ್ರ, ಗುಜರಾತ್ 15 ಕ್ಷೇತ್ರಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವ ಕೇಂದ್ರ ಸಚಿವರ ಹೆಸರೂ ಘೋಷಣೆ ಆಗಿಲ್ಲ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ನಾರಾಯಣಸ್ವಾಮಿ ಸೇರಿ 25 ಸಂಸದರ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಕರ್ವಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ
ಯಾರ್ಯಾರು ಯಾವ್ಯಾವ ಕ್ಷೇತ್ರದಿಂದ
ಅರುಣಾಚಲ ವೆಸ್ಟ್- ಅರುಣ್ ರಿಜಿ
ಅರುಣಾಚಲ ಪಶ್ಚಿಮ- ತಾಪಿರ್ ಗಾವ್ಜು
ಕರೀಂಗಜ್- ಕೃಪನಾಥ್ ಬ
ಸಿಲ್ಚರ್- ಗರೀಂಮಲ್ಲ
ಗುವಾಹಟಿ- ಬಿಜುಲಿ
ನೌಗಾವ್ – ಸುರೇಶ್ ಬೋರಾ
ಚೌರಾಟ್ – ಪ್ರಥಮ್ ಕುಮಾರ್ ಗೋಗೋ
ಬಿಲಾಸಪುರ್- ತೇಖನ್ ಸಾಹು
ಬಿಲಾಸಪುರ್- ತೇಖನ್ ಸಾ
ದುರ್ಗ್ -ವಿಜಯ್ ಬಗೇಲ್ಹು
ರಾಯಪುರ್- ಬ್ರಿಜ್ ಮೋ
ರಾಯಗಢ- ರಾಜೇಶ್ ರಾಮ್ ರಾಠಿ
ರಾಜನಂದಗಾವ್ – ಸಂತೋಷ್ ಪಾಂಡೆ