ಬಿಜೆಪಿಯಿಂದ ಬಿಗ್ ಆಪರೇಷನ್, ಡಿಕೆಶಿ ಆಪ್ತನಿಗೆ ಗಾಳ?..ಆ ನಾಯಕ ಯಾರು?

Views: 150
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರೇ ಸೋತಿದ್ದರು. ಇದೀಗ ಸೋತ ನಾಯಕರು ಲೋಕ ಸಮರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಟಿಕೆಟ್ ಪಡೆಯಲು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಿರೋದು ಕಂಡು ಬರುತ್ತಿದೆ.
ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಯಾರಿಗೂ ಯಾವುದೇ ಭರವಸೆಯನ್ನು ನೀಡದೇ, ನೋಡೋಣ ಎನ್ನುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಹಾಲಿ ಸಂಸದ ಬಿಎನ್ ಬಚ್ಚೇಗೌಡರು ಚುನಾವಣೆಯಿಂದ ಹಿಂದೆ ಸರಿಯುವ ಕಾರಣದಿಂದ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಆದರೆ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೊಸ ಮುಖಕ್ಕೆ ಟಿಕೆಟ್ ನೀಡಲು ಪ್ಲಾನ್ ಮಾಡಿಕೊಂಡಿದೆಯಂತೆ. ಈ ಹಿನ್ನೆಲೆ ಡಿಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮಾಜಿ ಶಾಸಕರೊಬ್ಬರನ್ನು ಬಿಜೆಪಿಯ ವರಿಷ್ಠರು ಸಂಪರ್ಕಿಸಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ಬಾರಿ ಶಾಸಕ, ಒಮ್ಮೆ ಡೆಪ್ಯೂಟಿ ಸ್ಪೀಕರ್ ಆಗಿದ್ದ ನಾಯಕನ ಜೊತೆ ಮಾತುಕತೆ ಬಿಜೆಪಿಯ ಉನ್ನತ ವರಿಷ್ಠರು ಮಾತುಕತೆ ನಡೆಸಿದ್ದಾರಂತೆ. ಬಿಜೆಪಿಗೆ ಬಂದರೆ ಚಿಕ್ಕಬಳ್ಳಾಪುರ ಟಿಕೆಟ್ ಆಫರ್ ಸಹ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗೌರಿಬಿದನೂರು ಮಾಜಿ ಶಾಸಕ ಶಿವಶಂಕರ ರೆಡ್ಡಿ ಅವರ ಜೊತೆ ಬಿಜೆಪಿ ಉನ್ನತ ನಾಯಕರೊಬ್ಬರು ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಗೌರಿಬಿದನೂರಿನ ಪಕ್ಷೇತರ ಶಾಸಕ ಹೆಚ್ಎಸ್ ಪುಟ್ಟಸ್ವಾಮಿಗೌಡ ಕಾಂಗ್ರೆಸ್ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಗೌರಿಬಿದನೂರಿನಲ್ಲಿ ಶಿವಶಂಕರ್ ರೆಡ್ಡಿ ಅವರನ್ನು ಸೈಡಲೈನ್ ಮಾಡಲಾಗ್ತಿದೆಯಂತೆ. ಕಾಂಗ್ರೆಸ್ ಸರ್ಕಾರವಿದ್ದರೂ ಕ್ಷೇತ್ರದಲ್ಲಿ ಶಿವಶಂಕರ್ ರೆಡ್ಡಿ ಅವರಿಗೆ ಮನ್ನಣೆ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದರಿಂದ ಶಿವಶಂಕರ್ ರೆಡ್ಡಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನೀಡಿದ್ರೆ ಶಿವಶಂಕರ್ ರೆಡ್ಡಿ ಗೆಲ್ಲಬಹುದು ಎಂಬುವುದು ಬಿಜೆಪಿಯ ಲೆಕ್ಕಾಚಾರವಾಗಿದೆಯಂತೆ
ಇತ್ತ ಶಿವಶಂಕರ್ ರೆಡ್ಡಿ ಕುಟುಂಬದಿಂದಲೂ ಬಿಜೆಪಿಗೆ ಶಿಫ್ಟ್ ಆಗಿ ಎಲೆಕ್ಷನ್ ನಿಲ್ಲುವಂತೆ ಒತ್ತಾಯ ಹಾಕ್ತಿದ್ದಾರಂತೆ. ಬಿಜೆಪಿ ನಾಯಕರ ಆಫರ್ಗೆ ಶಿವಶಂಕರ್ ರೆಡ್ಡಿ ತಮ್ಮ ನಿರ್ಧಾರ ತಿಳಿಸಲು ಸಮಯಾವಕಾಶ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.