ಬಾರ್ಕೂರು ಬಟ್ಟೆ ವಿನಾಯಕ ಟವರ್ಸ್ ಲೋಕಾರ್ಪಣೆ

Views: 283
ಬ್ರಹ್ಮಾವರ: ಬಾರ್ಕೂರು ರಥಬೀದಿಯ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಟ್ಟೆ ವಿನಾಯಕ ಟವರ್ಸ್ ಮಾರ್ಚ್ 13 ರಂದು ಲೋಕಾರ್ಪಣೆ ಗೊಂಡಿದೆ.
ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಬಿ ಅಪ್ಪಣ್ಣ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಶೀಘ್ರವಾಗಿ ಬೆಳೆಯುತ್ತಿರುವ ಬಾರ್ಕೂರಿನಲ್ಲಿ ಬಟ್ಟೆ ವಿನಾಯಕ ವಾಣಿಜ್ಯ ಸಂಕೀರ್ಣ ಮೂಲಕ ಊರಿನ ಕೀರ್ತಿ ಬೆಳೆಯುವುದರ ಜೊತೆಗೆ ಸಮಾಜದ ಅಭಿವೃದ್ಧಿ ಸಾಕಾರಗೊಳ್ಳಲಿ ಎಲ್ಲಾ ಗುಣಮಟ್ಟದಲ್ಲಿಯೂ ಅಭಿವೃದ್ಧಿಯಾಗಿ ಜನರು ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್ ಅವರು ಮಾತನಾಡಿ, ಕೆಲವೊಂದು ಕುಟುಂಬಗಳಿಗೆ ಬದುಕನ್ನು ಕಟ್ಟಿಕೊಟ್ಟಿದ್ದಲ್ಲದೆ ಬಾರ್ಕೂರಿನ ಜನತೆಗೆ ಅವಶ್ಯಕತೆಗಳನ್ನು ಪೂರೈಸಿ ಈ ಊರು ಇನ್ನಷ್ಟು ಅಭಿವೃದ್ಧಿಪಥದತ್ತ ಸಾಗಲಿ ಎಂದರು.
ಟವರ್ಸ್ ಪ್ರವೇಶದ್ವಾರವನ್ನು ಬಿ ಅಪ್ಪಣ್ಣ ಹೆಗ್ಡೆ ವಾಣಿಜ್ಯ ಮಳಿಗೆಯನ್ನು ನಿತ್ಯಾನಂದ ಕಾಮತ್, ವಸತಿ ಕೊಠಡಿಗಳನ್ನು ಆನಂದ ಸಿ ಕುಂದರ್, ಮಿನಿ ಸಭಾಂಗಣವನ್ನು ಬಾರ್ಕೂರು ಶಾಂತರಾಮ್ ಶೆಟ್ಟಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಬಾರ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಶಾಂತರಾಮ ಶೆಟ್ಟಿ ಬಾರ್ಕೂರು, ಸರ್ವೋದಯ ಕ್ರೆಡಿಟ್ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶ್ರೀ ನಿತ್ಯಾನಂದ ಕಾಮತ್ ವೇದಮೂರ್ತಿ ರಮೇಶ್ ಭಟ್, ಶ್ರೀಮತಿ ಯಶೋಧ ಶ್ರೀನಿವಾಸ ಶೆಟ್ಟಿಗಾರ, ಶ್ರೀಮತಿ ವಿನಯ ಸಂತೋಷ್ ಕುಮಾರ್ ಶೆಟ್ಟಿ ಇದ್ದರು.
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ಇಂಜಿನಿಯರ್ ಪ್ರಶಾಂತ್ ಪೂಜಾರಿ, ಉಪೇಂದ್ರ ಆಚಾರ್, ವಿಶ್ವನಾಥ, ಸಂತೋಷ್, ಪ್ರಶಾಂತ್ ಮೇಸ್ತ್ರಿ ಇವರಿಗೆ ಸನ್ಮಾನ ನೀಡಲಾಯಿತು.
ಪಾಲುದಾರರಾದ ಶ್ರೀನಿವಾಸ್ ಶೆಟ್ಟಿಗಾರ್ ಸಂತೋಷ್ ಕುಮಾರ್ ಶೆಟ್ಟಿ ಅವರಿಗೆ ಸರ್ವೋದಯ ಕ್ರೆಡಿಟ್ ಆಪರೇಟಿವ್ ಸೊಸೈಟಿ ಪರವಾಗಿ ನಿರ್ದೇಶಕರಾದ ಶ್ರೀ ನಿತ್ಯಾನಂದ ಕಾಮತ್ ಸನ್ಮಾನಿಸಿದರು.
ರಾಜೇಶ್ ಶಾನುಭಾಗ್ ಪ್ರಾರ್ಥಿಸಿದರು. ಪಾಲುದಾರರಾದ ಶ್ರೀನಿವಾಸ ಶೆಟ್ಟಿಗಾರ ಸ್ವಾಗತಿಸಿದರು.ಸುಧಾಕರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.