ಶಿಕ್ಷಣ
ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಪುಟಾಣಿಗಳಿಗೆ ರೈನಿ ಡೇ ಕಾರ್ಯಕ್ರಮ

Views: 72
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳಿಗೆ ರೈನಿ ಡೇ ಕಾರ್ಯಕ್ರಮವನ್ನು ಜುಲೈ 25 ರಂದು ಆಯೋಜಿಸಲಾಯಿತು.
ಮಕ್ಕಳು ಶಾಲಾ ಸಂಚಾಲಕರನ್ನು ಕ್ರಾಫ್ಟ್ ಛತ್ರಿ ಯನ್ನು ನೀಡಿ ಸ್ವಾಗತಿಸಿದರು.
ಕುಮಾರಿ ರಾದ್ಯಾಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕುಮಾರಿ ಮೈರಾ ಅಕ್ರಮ್ ಶೇಕ್ ಮಳೆಗಾಲದ ಕುರಿತು ಮಾತನಾಡಿದರು. ನಂತರ ರೈನಿ ಡೇಗೆ ಸಂಬಂಧಿಸಿದ ಶಿಶು ಗೀತೆಗಳಿಗೆ ಅಭಿನಯಿಸಿ ಸಂಭ್ರಮಿಸಿದರು. ಬಳಿಕ ಕಾಗದದಿಂದ ಮಾಡಿದ ದೋಣಿಯನ್ನು ನೀರಿನಲ್ಲಿ ತೇಲಿಬಿಟ್ಟು ಸಂತಸ ಗೊಂಡರು.ತದನಂತರ ಮಳೆಯಲ್ಲಿ ಛತ್ರಿಯನ್ನು ಹಿಡಿದು ನರ್ತಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ,ಆಡಳಿತ ಅಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಅಡಪ ಉಪಸ್ಥಿತರಿದ್ದರು.
ಕುಮಾರಿ ಸಿಫತ್ ರಾಜ್ ಸಲ್ಮಾನ್ ಸ್ವಾಗತಿಸಿದರು. ಐರಾ ಫಾತಿಮಾ ವಂದಿಸಿದರು.






