ರಾಜಕೀಯ

ಬಜರಂಗದಳ ನಿಷೇಧ ಪ್ರಸ್ತಾವ ಇಲ್ಲ: ಮೊಯಿಲಿ  

Views: 0

ಕುಂದಾಪುರ : ಬಜರಂಗದಳವನ್ನು ನಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯ ಡಾ. ವೀರಪ್ಪ ಮೊಯಿಲಿ ಹೇಳಿದರು.

ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಓಟಿಗಾಗಿ ವಾಸ್ತವ ಸಂಗತಿಯನ್ನು ತಿರುಚಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಇಂಥಹ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸಕಾ೯ರಕ್ಕೆ ಇಲ್ಲ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸಕಾ೯ರದಿಂದ ಕ್ರಮಕೈಗೊಳ್ಳಬೇಕಾಗುತ್ತದೆ.

ಕರಾವಳಿಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇರುವುದರಿಂದ ಜಯ ಸಾಧಿಸಸಲಿದೆ.

ಗಲಾಟೆ, ದೊಂಬಿ ಇತ್ಯಾದಿಗಳಲ್ಲಿ ಕಾಂಗ್ರೆಸ್ ಗೆ ವಿಶ್ವಾಸವಿಲ್ಲ. ನಮಗೆ ಸಾಮಾಜಿಕ ಕಾಯ೯ದಲ್ಲಿ ವಿಶ್ವಾಸವಿದ್ದು, ಪ್ರಜ್ಞಾವಂತ ಮತದಾರರು ಇದನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಹೀಗಾಗಿ ನಿರೀಕ್ಷೆಗೂ ಮೀರಿದ ಜಯ ಸಾಧಿಸಲಿದ್ದೇವೆ ಎಂದರು.

Related Articles

Back to top button